Coastal Bulletin

ಬೆಂಗಳೂರು: ರಾಜ್ಯದಲ್ಲಿ ಗೊಂದಲದಲ್ಲಿರುವ ಹಿಜಾಬ್ ಪ್ರಕರಣವನ್ನು ಸರಿದೂಗಿಸಲು ನಿನ್ನೆ ಸರ್ಕಾರ ಕಾಲೇಜಿಗಳಿಗೆ ಮೂರು ದಿವಸ ರಜೆ ಘೋಷಣೆ ಮಾಡಿದೆ. ಇದೀಗ ಈ ಪ್ರಕರಣದ ಅರ್ಜಿಯನ್ನು ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾವಣೆಗೊಂಡಿದೆ.

ಉಡುಪಿಯಲ್ಲಿ ಹಿಜಾಬ್ ನಮ್ಮ ಹಕ್ಕು ಎಂದು ಮುಸ್ಲಿಂ ವಿದ್ಯಾರ್ಥಿಗಳು ಮಾಡಿದ ಪ್ರಕರಣ ಇದೀಗ ಬಹಳ ಚರ್ಚೆಗೆ ಒಳಗೊಂಡಿದೆ.

ಇಂದು ಮಧ್ಯಾಹ್ನ ಶುರುವಾದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಈ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದು ಒಳ್ಳೆಯದು ಎಂದರು.

ಇದಕ್ಕೆ ಉತ್ತರಿಸಿದ ಹಿರಿಯ ವಕೀಲ ಸಂಜಯ

ಹೆಗಡೆ ಮಕ್ಕಳ ಶೈಕ್ಷಣಿಕ ವರ್ಷ ಇನ್ನೆರಡು ತಿಂಗಳಲ್ಲಿ ಕೊನೆಗೊಳ್ಳಲಿದೆ. ಅದಷ್ಟು ಈ ಪ್ರಕರಣವನ್ನು ಬೇಗ ಮುಗಿಸಿವುದು ಉತ್ತಮ ಎಂದರು.

ಈ ಎಲ್ಲಾ ವಾದ ಗಳನ್ನು ಆಲಿಸಿ ಈ ಪ್ರಕರಣವನ್ನು ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ  ವರ್ಗಾವಣೆ ಮಾಡಲು ಹೈಕೋರ್ಟ್ ನಿರ್ಧರಿಸಿದೆ.


Leave a Comment