ಬಂಟ್ವಾಳ: ಇಲ್ಲಿನ ಸಜೀಪಮೂಡ ಗ್ರಾಮದ ವಿಟ್ಲುಕೋಡಿ ನಿವಾಸಿ ತನಿಯಾರು ಇವರ ಮನೆ ಕುಸಿದು ಬೀಳುವ ಸ್ಥಿತಿಯಲ್ಲಿದ್ದು ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ೧೦ ಸಾವಿರ ರೂಪಾಯಿ ಆರ್ಥಿಕ ನೆರವನ್ನು ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕೆ. ಹಸ್ತಾಂತರಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನ ಪಾಲು, ನಿರ್ದೆಶಕರಾದ ರಮೇಶ್ ಅನ್ನಪ್ಪಾಡಿ, ವಿಠಲ ಬೆಳ್ಚಾಡ, ಅಶೋಕ್ ಪೂಜಾರಿ
ಕೋಮಾಲಿ, ಜಯಶಂಕರ್ ಕಾನ್ಸಲೆ, ಗಿರೀಶ್ ಕುಮಾರ್ ಪೆರ್ವ, ವಾಣಿ ವಸಂತ ಕೆ, ಸುಜಾತ ಎಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ, ಸಿಬ್ಬಂದಿಗಳು ಉಪಸ್ಥಿತರಿದ್ದರು.














