Coastal Bulletin

ಬಂಟ್ವಾಳ: ಬಡ್ಡಕಟ್ಟೆ ಭಗವಾನ್ ಪಾರ್ಕಿನ ರಿಕ್ಷಾ ಚಾಲಕರು, ಮಾಲಕರ ಸಂಘದ ಕ್ಷೇಮನಿಧಿಯ ವತಿಯಿಂದ ಸಂಚಾರಿ ಐಸಿಯು ಬಸ್ಸ್ ನ ಮೂಲಕ ರಿಕ್ಷಾ ಚಾಲಕರು ಹಾಗೂ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಂಗಳವಾರ ಬಡ್ಡಕಟ್ಟೆ ಜಂಕ್ಷನ್‌ನಲ್ಲಿ ನಡೆಯಿತು.

ರಿಕ್ಷಾ ಚಾಲಕರು ಸಹಿತ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದು ಕೊಂಡರು. ಈ ಸಂದರ್ಭ ಬಂಟ್ವಾಳ ತಾಲೂಕು ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್, ಕ್ಷೇಮ ನಿಧಿಯ ಗೌರವಾಧ್ಯಕ್ಷ ರಾಜೇಶ್ ನೆಕ್ಕರೆ, ಕ್ಷೇಮನಿಧಿ ಅಧ್ಯಕ್ಷ ವಸಂತ ಕುಲಾಲ್ ನಾವೂರು ಕಾರ್ಯದರ್ಶಿ ಉಮೇಶ್ ಕರ್ಕೆರಾ ನಾವೂರು, ಕೋಶಾಧಿಕಾರಿ ರಾಜೇಶ್ ಕೇದಾಯಿ, ಸಲಹೆಗಾರ ಉಮಾಶಂಕರ್ ಚೆಂಡ್ತಿಮಾರ್,

ವಿನ್ಸೆಂಟ್ ಜಕ್ರಿಬೆಟ್ಟು, ಜತೆ ಕಾರ್ಯದರ್ಶಿ ಉಮಾಶಂಕರ್ ಹನುಮಾನ್ ನಗರ, ಉಪಾಧ್ಯಕ್ಷ ಜಯಕೀರ್ತಿ ಜಕ್ರಿಬೆಟ್ಟು ಪ್ರಮುಖರಾದ ಯೋಗೀಶ್ ಪಟ್ಲ, ಸಂಜೀವ ಪೂಜಾರಿ ಅಗ್ರಹಾರ್, ಹರೀಶ ಹಳೆಗೇಟು, ಸತೀಶ, ವಸಂತ್ ಕುಮಾರ್ ಮಣಿಹಳ್ಳ, ಜಯರಾಮ ಚೆಂಡ್ತಿಮಾರ್, ಹಮೀದ್ ಮೈಂದಲ, ಆನಂದ ಚೆಂಡ್ತಿಮಾರ್, ಜನಾರ್ದನ ಕೊಂಬೆಟ್ಟು, ಜಯಂತ ಮೈದಂಲ, ಜಯಂತ ದಡ್ಡಲಕಾಡು, ರಾಜ ಅಲ್ಲಿಪಾದೆ, ಅಶ್ರಫ್ ನಾವೂರು ಉಪಸ್ಥಿತರಿದ್ದರು.

Leave a Comment