ಮೈಸೂರು : ಹೂಟಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 20ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮುಖಾಂತರ ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ತಾಲೂಕು ಉಪಾಧ್ಯಕ್ಷರಾದ ನಾಗರಾಜುರವರು ನಡೆದಾಡುವ ದೇವರು ತ್ರಿವಿಧ ದಾಸೋಹಿ ಶ್ರೀ ಶ್ರೀ ಸಿದ್ದಗಂಗಾ ಮಹಾಸ್ವಾಮಿಗಳವರ ಪುಣ್ಯ ಸ್ಮರಣೆ ಅಂಗವಾಗಿ ಕರ್ನಾಟಕದಾದ್ಯಂತ ವಿವಿಧ ಭಾಗಗಳಲ್ಲಿ ಅನ್ನದಾನ ಮಾಡುವ ಮುಖಾಂತರ ದಾಸೋಹ ದಿನವನ್ನಾಗಿ ಆಚರಿಸುತ್ತಿದ್ದಾರೆ ಆದರೆ ನಮ್ಮ ಕಡೆಯಿಂದ ಪರಿಸರಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಸ್ವಾಮೀಜಿ ರವರ ಹೆಸರಿನಲ್ಲಿ ಸಸಿಗಳನ್ನು ನೆಟ್ಟು ಅದರ ಪಾಲನೆ ಪೋಷಣೆ
ಮಾಡುವುದಾಗಿ ನಾವು ಇಂದು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹೂಟಗಳ್ಳಿ M.P.ನಾಗರಾಜ್. ತಾಲ್ಲೂಕು ಉಪಾಧ್ಯಕ್ಷರು ರೈತ ಮೋರ್ಚಾ ಬಿಜೆಪಿ H.M ಸತೀಶ್ ಶಾಲಾ ಶಿಕ್ಷಕರು . C.A ಮಾದಪ್ಪ ಬೂತ್ ಅಧ್ಯಕ್ಷರು . G.M ಕುಲಕರ್ಣಿ ಬೂತ್ ಕಾರ್ಯದರ್ಶಿಗಳು . ಜಯಂತ್ ಯುವಮೋರ್ಚಾ ಕಾರ್ಯದರ್ಶಿಗಳು. S.D.M.C ಸದಸ್ಯರುಗಳಾದ ಮಹೇಶ್ ಭೋವಿ. ರಮೇಶ್ P.B ರಂಗಸ್ವಾಮಿ ಬಿಜೆಪಿ ಕಾರ್ಯಕರ್ತರುಗಳಾದ ಹರೀಶ್ . ಗಿರೀಶ್.ರಾಚಪ್ಪ . ಗಣೇಶ್. ಮುಂತಾದವರು ಉಪಸ್ಥಿತರಿದ್ದರು.














