ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಹಾಗೂ ನಟಿ ಅಥಿಯಾ ಶೆಟ್ಟಿ ಕ್ರಿಕೆಟಿಗ ಕೆ.ಎಲ್ ರಾಹುಲ್ ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಇಬ್ಬರೂ ಜನವರಿ 23ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮ್ಯಾನ್ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ಹೀರೋ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಮದುವೆ ಸಂಭ್ರಮ ಶುರುವಾಗ್ತಿದೆ. ಮಹಾರಾಷ್ಟ್ರದ ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್ ನಲ್ಲಿ ವಿವಾಹದ ಸಿದ್ಧತೆ ಮಾಡಲಾಗಿದೆ.ಖಂಡಾಲಾ ಬೆಟ್ಟದ ಮಧ್ಯೆ ಇರುವ ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್ ಮದುವೆಗೆ ಮಂಟಪ ರೆಡಿಯಾಗಿದೆ. ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.
ಅಥಿಯಾ- ರಾಹುಲ್ ಮದುವೆಗೆ ಆಹ್ವಾನಿತ 100 ಮಂದಿಗೆ ಮಾತ್ರ ಅವಕಾಶ.
ಇಂದಿನಿಂದ ಸುನೀಲ್ ಶೆಟ್ಟಿ
ಪುತ್ರಿ ಅಥಿಯಾ ಶೆಟ್ಟಿ ಮದುವೆ ಕಾರ್ಯಕ್ರಮ ಆರಂಭವಾಗಿದ್ದು, ಮದುವೆಗೆ ಆಗಮಿಸುವ ಅತಿಥಿಗಳಿಗೆ ಕೆಲವು ಷರತ್ತುಗಳನ್ನು ಹಾಕಲಾಗಿದೆ.ಈ ಮದುವೆಯಲ್ಲಿ ಮೊಬೈಲ್ ಫೋನ್‌ಗಳಿಗೆ ನಿಷೇಧಿಸಲಾಗಿದೆ. ಅದೇ ಸಮಯದಲ್ಲಿ, ಮದುವೆಗೆ 100 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗುತ್ತಿದೆ. ಇದರಲ್ಲಿ ವಧು ಮತ್ತು ವರನ ಎರಡೂ ಕಡೆಯಿಂದ ಸೇರಿ ಕೇವಲ 100 ಅತಿಥಿಗಳು ಮಾತ್ರ ಇರುತ್ತಾರೆ.
ಸುನೀಲ್ ಶೆಟ್ಟಿಯ ಭವ್ಯ ಬಂಗಲೆಯಲ್ಲಿ ಅದ್ಧೂರಿಯಾಗಿ ಸಪ್ತಪದಿ ತುಳಿಯಲು ರಾಹುಲ್ ಹಾಗೂ ಅಥಿಯಾ ಶೆಟ್ಟಿ ರೆಡಿಯಾಗಿದ್ದಾರೆ. ಏಪ್ರಿಲ್ ನಲ್ಲಿ ಕೆ.ಎಲ್ ರಾಹುಲ್, ಅಥಿಯಾ ಶೆಟ್ಟಿ ಆರತಕ್ಷತೆ ಅದ್ಧೂರಿಯಾಗಿ ನಡೆಯಲಿದೆ.














