ಬಂಟ್ವಾಳ :ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದ.ಕ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ -2 ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ನ ದೋಂಪದ ಬಳಿ ಅಂಗನವಾಡಿಯಲ್ಲಿ ಮಳೆ ನೀರು ಕೊಯ್ಲು ಮತ್ತು ಬೂದು ನೀರು ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಗಾರವನ್ನು ಜ.21ರಂದು ಆಯೋಜಿಸಲಾಗಿತ್ತು.
ಈ ತರಭೇತಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಸೇರಿ ಒಟ್ಟು 47 ಮಂದಿ ಭಾಗವಹಿಸಿದ್ದರು. ಜಲ ಜೀವನ್ ಮಿಷನ್ ನ ಅನುಷ್ಠಾನ
ಬೆಂಬಲ ಸಂಸ್ಥೆಯ ಸಿಬ್ಬಂದಿ ಚರಣ್ ರಾಜ್ ಹಾಗು ವಿಲ್ಮ ರವರು ಮಳೆ ನೀರು ಕೊಯ್ಲು ಘಟಕ ಮತ್ತು ಬೂದುನೀರು ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಬಂಟ್ವಾಳ ತಾಲೂಕಿನ ಜಲ ಜೀವನ್ ಮಿಷನ್ ನ ಸಮುದಾಯ ಸಂಘಟಕರಾದ ವಿಲ್ಮಾ ರವರು ಕಾರ್ಯಕ್ರಮವನ್ನು ಆಯೊಜಿಸಿ. ಯಶಸ್ವಿಗೊಳಿಸಿದರು.














