ಬಿ ಎಸ್ ವೈ ಅಭಿಮಾನೋತ್ಸವ ಕಾರ್ಯಕ್ರಮ ಯಶಸ್ವೀಗೊಳಿಸೋಣ : ಡಿ ವೇದವ್ಯಾಸ ಕಾಮತ್. ಬಂಟ್ವಾಳದಿಂದ ಅಧಿಕ ಸಂಖ್ಯೆಯ ಕಾರ್ಯಕರ್ತರು ಭಾಗಿ : ರಾಜೇಶ್ ನಾಯ್ಕ್

Coastal Bulletin
ಬಿ ಎಸ್ ವೈ ಅಭಿಮಾನೋತ್ಸವ ಕಾರ್ಯಕ್ರಮ ಯಶಸ್ವೀಗೊಳಿಸೋಣ : ಡಿ ವೇದವ್ಯಾಸ ಕಾಮತ್. ಬಂಟ್ವಾಳದಿಂದ ಅಧಿಕ ಸಂಖ್ಯೆಯ ಕಾರ್ಯಕರ್ತರು ಭಾಗಿ : ರಾಜೇಶ್ ನಾಯ್ಕ್

ಬಂಟ್ವಾಳ :ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ರಾಜಕೀಯ ಜೀವನದ 50 ವರುಷದ ಸಂಭ್ರಮದ ಪ್ರಯುಕ್ತ ಅಭಿಮಾನೋತ್ಸವ ಕಾರ್ಯಕ್ರಮವು ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿದ್ದು ಜಿಲ್ಲೆಯಿಂದ 5 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದು ಬಂಟ್ವಾಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸೋಣ ಎಂದು ಅಭಿಮಾನೋತ್ಸವದ ಜಿಲ್ಲಾ ಸಂಚಾಲಕ ಡಿ ವೇದವ್ಯಾಸ ಕಾಮತ್ ಹೇಳಿದರು.

ಅವರು ಬಿ ಸಿ ರೋಡಿನ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಸುಮಾರು 10ಲಕ್ಷ ಜನ ಸೇರುವ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದ ಪ್ರಚಾರಕ್ಕಾಗಿ ಈಗಾಗಲೇ ಜಿಲ್ಲೆಯಲ್ಲಿ ಪಕ್ಷದ ಮುಖಂಡರು ಸಿದ್ಧತಾ ಸಭೆ ನಡೆಸಿ 50 ವಾಹನಗಳಿಗೆ ಸ್ಟಿಕ್ಕರ್ ಅಳವಡಿಸಿ ಚಾಲನೆ ನೀಡಲಾಗಿದೆ, ಯಡಿಯೂರಪ್ಪನವರು ಕರಾವಳಿ ಭಾಗಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿದವರು,ಪಕ್ಷಕ್ಕಾಗಿ ತಳಮಟ್ಟದಿಂದ ಶ್ರಮಿಸಿದವರು ಆದ್ದರಿಂದ ಅಭಿಮಾನೋತ್ಸವ ಕಾರ್ಯಕ್ರಮದ ಯಶಸ್ವೀಗಾಗಿ ಕಾರ್ಯಕರ್ತರು ಅಭಿಮಾನಿಗಳು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೇಳಿದರು

ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಹೊರಡುವ ಬಂಟ್ವಾಳ ತಾಲೂಕಿನ ಕಾರ್ಯಕರ್ತರಿಗೆ ಈಗಾಗಲೇ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ,ಬಂಟ್ವಾಳದಿಂದ ಸುಮಾರು 1000 ಸಾವಿರ

ಕಾರ್ಯಕರ್ತರು ಭಾಗಿಯಾಗುವ ನೀರಿಕ್ಷೆ ಇದೆ ಈ ಬಗ್ಗೆ ತಯಾರಿ ನಡೆಸಲಾಗಿದೆ ಎಂದರು.

ಬಂಟ್ವಾಳ ಬಿ ಜೆ ಪಿ ಕ್ಷೇತ್ರಾಧ್ಯಕ್ಷ ಆರ್ ಚೆನ್ನಪ್ಪ ಕೋಟ್ಯಾನ್ ಮಾತನಾಡಿ ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ ಹೆಗ್ಗಳಿಕೆ ಹೊಂದಿರುವ ಯಡಿಯೂರಪ್ಪನವರು ಕಾರ್ಯಕರ್ತರಿಗೆ ಸ್ಫೂರ್ತಿ, ಪ್ರೇರಕ ಶಕ್ತಿ. ಅವರ ಕಾರ್ಯಕ್ರಮ ಅರ್ಥಪೂರ್ಣವಾಗಲು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿ ಜೆ ಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಪ್ರೇಮಾನಾಥ ಶೆಟ್ಟಿ, ದಿನೇಶ್ ಅಮ್ಟೂರ್,ಕ್ಷೇತ್ರದ ಪ್ರ ಕಾರ್ಯದರ್ಶಿಗಳಾದ ಶಿವ ಪ್ರಸಾದ್ ಶೆಟ್ಟಿ , ಸುದರ್ಶನ್ ಬಜ,ಮಾಧ್ಯಮ ಪ್ರಮುಖ್ ಪುರುಷೋತ್ತಮ್ ಶೆಟ್ಟಿ ವಾಮದಪದವು, ಡೊಂಬಯ್ಯ ಅರಳ, ಪ್ರಣಾಮ್ ರಾಜ್ ಉಸ್ಥಿತರಿದ್ದರು.


Leave a Comment