Coastal Bulletin

2019ರ ಫೆಬ್ರವರಿ 14 ರಂದು ಭಾರತದ 40 ವೀರ ಯೋಧರು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ದಿನವಿಂದು ಇದರ ಪ್ರಯುಕ್ತ ರಾಜೇಂದ್ರ ನಗರದ 1008 ಗಣಪತಿ ದೇವಸ್ಥಾನ ಮುಂಭಾಗ ಹುತಾತ್ಮರಾದ ವೀರ ಯೋಧರ ಭಾವಚಿತ್ರವನ್ನು ಹಿಡಿದು ಹಾಗೂ ಮೇಣದಬತ್ತಿ ಹಚ್ಚುವ ಮುಖಾಂತರ ಮೌನಾಚರಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ ರವರು ಫೆಬ್ರವರಿ 14, 2019 ರಂದು, ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ , ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಿಂದಾಗು ಕೇಂದ್ರ ಮೀಸಲು ಪೊಲೀಸ್ ಪಡೆಯ ೪೦ ಮಂದಿ ಹುತಾತ್ಮರಾದರು. ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಇಸ್ಲಾಮ್ ಉಗ್ರಗಾಮಿ ಗುಂಪು ಜೈಷ್–ಎ–ಮೊಹಮದ್ ಹೊತ್ತುಕೊಂಡಿದೆ. ಆದಿಲ್ ಅಹ್ಮದ್ ದಾರ್ ಎಂಬ ಹೆಸರಿನ ಸ್ಥಳೀಯ ಯುವಕನನ್ನು ಆಕ್ರಮಣಕಾರಿ ಎಂದು ಗುರುತಿಸಲಾಗಿದೆ. ಇದು ನಿಜಕ್ಕೂ ಇಂದು ಕರಾಳ ದಿನ ಆದ್ದರಿಂದ ಪ್ರತಿಯೊಬ್ಬ ಭಾರತೀಯರು ವೀರ ಯೋಧರನ್ನು ನೆನೆದು ಭಾವಪೂರ್ಣ ಗೌರವ ನಮನವನ್ನು ಸಲ್ಲಿಸುವ ಮುಖಾಂತರ ಈ ದಿನವನ್ನು ಯೋಧರಿಗೆ ದೇಶ ಪ್ರೇಮಿಗಳ ದಿನಾಚರಣೆಯಾಗಿ   ಆಚರಿಸಬೇಕು ಎಂದು  ಯುವಕರಲ್ಲಿ ಕೇಳಿಕೊಂಡರು.

ನಂತರ ಮಾತನಾಡಿದ ಮೈಸೂರು ನಗರ ಪ್ರಧಾನ ಕಾರ್ಯದರ್ಶಿಗಳಾದ ಹೆಚ್ ಜಿ ಗಿರಿಧರ್ ರವರು ಇಂದು  ಪ್ರೇಮಿಗಳ ದಿನಾಚರಣೆ ಆದರೆ

ದೇಶ ಪ್ರೇಮಿಗಳಿಗೆ ಇಂದು ಕರಾಳ ದಿನಾಚರಣೆ ಪುಲ್ವಾಮ ದಾಳಿಯಲ್ಲಿ ವೀರ ಯೋಧರು ಹುತಾತ್ಮರಾಗಿ ಇಂದಿಗೆ 3 ವರ್ಷವಾಗಿದೆ ನಲವತ್ತಕ್ಕೂ ಹೆಚ್ಚು ಯೋಧರು ತಮ್ಮ ಜೀವವನ್ನು ದೇಶಕ್ಕೆ ಸಮರ್ಪಿಸಿದ್ದಾರೆ ಅವರನ್ನು ನೆನೆದು ಪ್ರತಿ ಯುವಕ ಯುವತಿಯರು ಇಂದು ವೀರಯೋಧರನ್ನು ಸ್ಮರಿಸಬೇಕಾಗಿದೆ ಹಾಗೂ ನರಸಿಂಹರಾಜ ಕ್ಷೇತ್ರದ ಯುವಮೋರ್ಚಾ ತಂಡವು ಇಂದು ಈ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಯುವಕರು ತಮ್ಮ ಮನೆಯ ಬಳಿ ಇರುವ ಸೈನಿಕರಿಗೆ ಹಾಗೂ ಅವರ ಕುಟುಂಬಸ್ಥರಿಗೆ  ನೆರವಾಗಬೇಕು ಎಂದು ತಿಳಿಸಿದರು. 

ಈ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಸಾಮಾಜಿಕ ಜಾಲತಾಣದ ಸಂಚಾಲಕರಾದ ಸು ಮುರುಳಿ, ನರಸಿಂಹರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಸ್ವಾಮಿಗೌಡ, ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ  ಲೋಹಿತ್, ಮೈಸೂರು ನಗರ ಕಾರ್ಯಕಾರಣಿ ಸದಸ್ಯರಾದ ಕೃಷ್ಣಮೂರ್ತಿ ರಾವತ್, ಮೈಸೂರು ನಗರ ಯುವ ಮೋರ್ಚಾ ಉಪಾಧ್ಯಕ್ಷರಾದ ನಿಶಾಂತ್, ನಗರ ಯುವ ಮೋರ್ಚಾ ಕಾರ್ಯದರ್ಶಿಗಳಾದ ಪುನೀತ್, ಬಿಜೆಪಿ ಮುಖಂಡರಾದ ನಾಣಿ ಗೌಡ, ಹಾಗೂ ಸ್ಮಾರ್ಟ್ ಮಂಜು, ಸಂತೋಷ್, ಕ್ಷೇತ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿ,ಅರುಣ್, ಮನೋಜ್ ,ವೆಂಕಿ,ಮುಂತಾದವರು ಉಪಸ್ಥಿತರಿದ್ದರು.

Leave a Comment