ಬಂಟ್ವಾಳ ತಾಲ್ಲೂಕಿನ ಬಡಗಬೆಳ್ಳೂರು ಗ್ರಾಮದ ಪ್ರಸಿದ್ಧ ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ಸಂಜೆ ಕೊಳತ್ತಮಜಲು ಎಂಬಲ್ಲಿ ಹೊರಟ ಆಕರ್ಷಕ ಹೊರೆಕಾಣಿಕೆ ಮೆರವಣಿಗೆಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್.ಶೆಟ್ಟಿ ಚಾಲನೆ ನೀಡಿದರು.
ಪ್ರಮುಖರಾದ ಜಯರಾಮ ಶೆಟ್ಟಿ ದಾಸಕೋಡಿ, ಗಂಗಾಧರ ಪೂಜಾರಿ ಕೊಪ್ಪಳ, ದಿವಾಕರ ನಾಯ್ಕ್ ಕಾಗುಡ್ಡೆ, ವೀಣಾ ಎಲ್.ಭಟ್, ಸವಿತಾ ಎಸ್.ಶೆಟ್ಟಿ, ಉಮೇಶ ಶೆಟ್ಟಿ ಪರಿಮೊಗರು, ದೇವಪ್ಪ ಪೂಜಾರಿ ಬಾಳಿಕೆ,
ತಿರುಲೇಶ್ ಬೆಳ್ಳೂರು, ನಂದರಾಮ್ ಶೆಟ್ಟಿ, ರಮೇಶ ಬಟ್ಟಾಜೆ, ತಿಮ್ಮಪ್ಪ ಶೆಟ್ಟಿ, ಮೋಹನ ಮೇಲಾಂಟ, ಬಾಲಕೃಷ್ಣ ಶೆಟ್ಟಿ, ಉಮಾನಾಥ ಸಪಲ್ಯ ಬೆಳ್ಳೂರು ಸಹಿತ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.














