Coastal Bulletin

ಬೆಂಗಳೂರು :ಕೊರೊನಾ ಟಫ್ ರೂಲ್ಸ್‌ ನಡುವೆಯೇ ಮೇಕೆದಾಟು ಪಾದಯಾತ್ರೆಯನ್ನು ಮುಂದುವರಿಸಿದ ಕಾಂಗ್ರೆಸ್ ಪಕ್ಷ , ಆಡಳಿತ ಪಕ್ಷಕ್ಕೆ ಹೈಕೋರ್ಟ್ ಚಾಟಿ ಬೀಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ ಅನುಮತಿ ಪಡೆಯದೆ ಪಾದಯಾತ್ರೆ ಮಾಡಿದನ್ನು ಪ್ರಶ್ನಿಸಿದೆ ಹಾಗೂ ಆಡಳಿತ ಸರಕಾರ ಇದರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದೆ.

ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ ಕಾಂಗ್ರೆಸ್  ಪಕ್ಷ ಸರಿ ಸುಮಾರು 30ಕ್ಕೂ ಹೆಚ್ಚು ಮಂದಿಯ ಎಫ್ ಐ ಆರ್ ದಾಖಲಾಗಿದೆ.

ಇಷ್ಟೆಲ್ಲಾ ಆದರೂ ಕಾಂಗ್ರೆಸ್ ಪಕ್ಷ ಪಾದಯಾತ್ರೆಯನ್ನು ಯಾವುದೇ ಕಾರಣದಿಂದಲೂ ನಿಲ್ಲಿಸಲು

ಸಾದ್ಯವಿಲ್ಲ ಇಂದು ಕೂಡ ನಮ್ಮ ನಡಿಗೆ ನಡೆಯಲಿದೆ ಎಂದು ಡಿ.ಕೆ. ಸುರೇಶ್ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಮೇಕೆದಾಟು ಯೋಜನೆ ಕೈಬಿಡುವಂತೆ ಬಿಜೆಪಿಯ ಹಲವು ನಾಯಕರು ಮನವಿ ಮಾಡಿಕೊಂಡಿದ್ದಾರೆ ಹಾಗೂ ತಕ್ಷಣದಿಂದಲೇ ನಿಲ್ಲಿಸುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಆದೇಶ ನೀಡಿದ್ದಾರೆ. ಈ ಆದೇಶದ ನಡುವೆಯೂ ಪಾದಯಾತ್ರೆ ಮುಂದುವರಿದೇ ಆದಲ್ಲಿ ಡಿ.ಕೆ.ಶಿ,ಸಿದ್ದರಾಮಯ್ಯ ಇವರ ಬಂಧನ ಬಹುತೇಕ ಖಚಿತವಾಗಿದೆ.

Leave a Comment