Coastal Bulletin

ಬೆಂಗಳೂರು : ಬೆಂಗಳೂರಿನ ಕುಂಬಳ ಗೂಡು ಸಮೀಪದ ಕೆಂಗೇರಿಯಿಂದ ಬಿಡದಿ ಮಾರ್ಗ ನಡುವೆ ಎರಡು ಕಾರು ಹಾಗೂ ಬೈಕ್ ಮೇಲೆ ಟಿಪ್ಪರ್ ಬಿದ್ದು ಆರು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಎರಡು ಕಾರುಗಳಲ್ಲಿ 5 ರಂತೆ 10 ಜನರು ಪ್ರಯಾಣ ಮಾಡುತ್ತಿದ್ದರು.
ಜಲ್ಲಿಯನ್ನು ಸಾಗಿಸುವ ವೇಳೆ ಟಿಪ್ಪರ್ ಪಕ್ಕದಲ್ಲೇ ಸಂಚರಿಸುತ್ತಿದ್ದ ವಾಹನಗಳ ಮೇಲೆ ಪಲ್ಟಿಯಾಗಿ ಬಿದ್ದ ಕಾರಣ,ಟಿಪ್ಪರ್ ಅಡಿಯಲ್ಲಿ ಇನ್ನೂ ಹಲವು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಬೈಕ್ ಸವಾರ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು,ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆ ಎ

02 ಎಂಎಂ 7749 ನಂಬರಿನ ಕಾರಿನಲ್ಲಿದ್ದ ವೀಣಾಮ್ಮ (42), ಇಂದ್ರ ಕುಮಾರ್ (14), ಕೀರ್ತಿ ಕುಮಾರ್ (40), ನಿಖಿತಾ ರಾಣಿ(29), ಸಾವನ್ನಪ್ಪಿದ್ದು, ನಾಲ್ವರೂ ಮಾಗಡಿ ಮೂಲದವರು. ಇನ್ನೊಂದು ಕಾರು ಕೆ ಎ 05 ಎಂಜೆ 99240 ಇದರಲ್ಲಿದ್ದ ಟೊಯೊಟಾ ಕಂಪೆನಿಯ ನೌಕರ ಟಿ. ಜೆ ಶಿವಪ್ರಕಾಶ್ ಮೃತಪಟ್ಟಿದ್ದಾರೆ. ಬೈಕ್ನಲ್ಲಿದ್ದ ಜಿತಿನ್ ಬಿ ಜಾರ್ಜ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Leave a Comment