ಚಿಕ್ಕಮಗಳೂರು:ಜಿಲ್ಲೆಯ ಜನರು ಬೆಚ್ಚಿ ಬೀಳುವಂತಹ ಒಂದು ಪ್ರಕರಣ ನಡೆದು ಹೋಗಿದೆ. ಮನೆಯಲ್ಲಿ ಇದ್ದಂತಹ ಮೂರು ಜನರನ್ನು ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿ ಕೊನೆಗೆ ತಾನೂ ಸಾವಿಗೆ ಶರಣಾದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಅತ್ತೆ, ನಾದಿನಿ ಹಾಗೂ ಮಗುವಿನ ಕೊಲೆ ಮಾಡಿದ್ದು, ಅತ್ತೆ ಜ್ಯೋತಿ (50), ನಾದಿನಿ ಸಿಂಧು (26) ಹಾಗೂ 7 ವರ್ಷದ ಮಗುವನ್ನು ಕೊಲೆ ಮಾಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಸಿಂಧು ಗಂಡ ಅವಿನಾಶ್ ಕಾಲಿಗೂ ಗುಂಡೇಟು ತಗುಲಿದೆ. ನಾಡ ಬಂದೂಕಿನಿಂದ ಮೂವರನ್ನ ರತ್ನಾಕರ್ ಹತ್ಯೆ ಮಾಡಿದ್ದಾನೆ. ಈ ಮೂವರನ್ನು ಕೊಲೆ ಮಾಡಿದ ಬಳಿಕ ರತ್ನಾಕರ್ ತೋಟಕ್ಕೆ ತೆರಳಿ ಬಂದೂಕಿನಿಂದ
ಗುಂಡು ಸಿಡಿಸಿಕೊಂಡು ಸಾವನ್ನಪ್ಪಿದ್ದಾನೆ.
ತೋಟದಲ್ಲಿ ಗುಂಡು ಹಾರಿಸಿಕೊಂಡು ತಾನೂ ಸಾವನ್ನಪ್ಪಿದ್ದಾನೆ. ಕಳೆದ ಎರಡು ವರ್ಷಗಳಿಂದ ಕೌಟುಂಬಿಕ ಕಲಹ ಇವರ ಮಧ್ಯೆ ನಡೆಯುತ್ತಿತ್ತು. ಇದರಿಂದ ಬೇಸತ್ತು ರತ್ನಾಕರ್, ಈ ಕೃತ್ಯ ಎಸಗಿದ್ದು ಮೂರು ಜನರನ್ನು ಕೊಂದು ನಂತರ ತಾನು ಸಾವಿಗೆ ಶರಣಾಗಿದ್ದಾನೆ.
ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಯಾಗಿದ್ದು, ಹೆಚ್ಚಿನ ತನಿಖೆಯ ನಂತರ ಇನ್ನಷ್ಟು ಮಾಹಿತಿ ಹೊರ ಬರಬೇಕಿದೆ.













