ಮೈಸೂರು : ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಕನ್ನಡ ಹಬ್ಬ ಹಾಗೂ ಕನಕದಾಸ ಜಯಂತಿ ಆಚರಿಸಲಾಯಿತು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವಂತಹ ಸಾಧಕರನ್ನು ಗುರುತಿಸುವ ಮುಖಾಂತರ ಮೈಸೂರಿನ ಸಂತ ಜೋಸೆಫರ ಕೇಂದ್ರೀಯ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಗಾಯಕರು, ರಂಗಭೂಮಿ ಕಲಾವಿದರು, ಹವ್ಯಾಸಿ ಬರಹಗಾರರು ಆದ ಬಾಗಳಿ ಮಹೇಶ್ ರವರಿಗೆ ಈ ದಿನ ಕಲಾಮಂದಿರದ ಪಕ್ಕದಲ್ಲಿರುವ ಕಿರು
ರಂಗ ಮಂದಿರದಲ್ಲಿ ಕನ್ನಡ ವಿಕಾಸರತ್ನ ಎಂಬ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಹೆಚ್. ಎಲ್. ಯಮುನಾ ರವರು, ಇತಿಹಾಸ ತಜ್ಞರಾದ ಶ್ರೀಯುತ ನಂಜೆ ರಾಜ ಅರಸರವರು, ಸಾಹಿತಿಗಳಾದ ಸತೀಶ್ ಜವರೇಗೌಡ ರವರು ಮುಂತಾದವರು ಉಪಸ್ಥಿತರಿದ್ದರು.














