ಬಿ.ಸಿ.ರೋಡ್ :ಸಾಯಿ ಕಿಡ್ಸ್‌ ಜೋನ್ ಪ್ಲೇ ಸ್ಕೂಲ್: ದಶಮಾನೋತ್ಸವದ ಅಂಗವಾಗಿ ಚಿತ್ರಕಲಾ ಸ್ಪರ್ಧೆ

Coastal Bulletin
ಬಿ.ಸಿ.ರೋಡ್ :ಸಾಯಿ ಕಿಡ್ಸ್‌ ಜೋನ್ ಪ್ಲೇ ಸ್ಕೂಲ್: ದಶಮಾನೋತ್ಸವದ ಅಂಗವಾಗಿ ಚಿತ್ರಕಲಾ ಸ್ಪರ್ಧೆ

ಬಂಟ್ವಾಳ: ಬಿ.ಸಿ.ರೋಡ್ ಶ್ರೀ ಸಾಯಿ ಕಿಡ್ಸ್ ಜೋನ್ ಪ್ಲೇ ಸ್ಕೂಲ್ ನ ದಶಮಾನೋತ್ಸವದ ಅಂಗವಾಗಿ ಶಾಲೆಯಲ್ಲಿ ತಾಲೂಕು ಮಟ್ಟದ ನರ್ಸರಿ, ಕಿಂಡರ್ ಗಾರ್ಡನ್, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ ಒಟ್ಟು 5 ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಿತು.

ಬಿ.ಸಿ.ರೋಡ್ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಸಿವಿಲ್ ಗುತ್ತಿಗೆದಾರ ಲೋಕೇಶ್ ಪೂಜಾರಿ ಪಚ್ಚಿನಡ್ಕ ಶಿಕ್ಷಣ ಸಂಯೋಜಕಿ ಪ್ರತಿಮಾ, ಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶಿಲ್ಪ ತೇಜಸ್, ಬಂಟ್ವಾಳ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಕೇಶವ ಡಿ.ಆರ್., ಶಾಲಾ ಆಡಳಿತ ಮಂಡಳಿ ಸದಸ್ಯ ರಾಜೇಶ್ ಅಮೀನ್ ಮುಖ್ಯ ಅತಿಥಿಗಳಾಗಿದ್ದರು.

ಶಾಲಾ ಸಂಚಾಲಕ ಐತಪ್ಪ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ದೀಕ್ಷಿತ ವಂದಿಸಿದರು. ಶಿಕ್ಷಕಿ ಆರತಿ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು. ತೀರ್ಪುಗಾರರಾಗಿ ಚೆನ್ನಕೇಶವ, ಮುರಳೀಧರ, ಮುರಳಿಕೃಷ್ಣ ಭಾಗವಹಿಸಿದ್ದರು.

ಚಿತ್ರಕಲಾ ಸ್ಪರ್ಧೆಯ ಫಲಿತಾಂಶ,


 ನರ್ಸರಿ ವಿಭಾಗ

 

 1) ದಿಯಾನ್ಶ್

ಶ್ರೀ ಸಾಯಿ ಕಿಡ್ಜೋನ್ ಪ್ಲೇ ಸ್ಕೂಲ್


2) ಕೃತಿ

ಶ್ರೀ ಸಾಯಿ ಕಿಡ್ಜೋನ್ ಪ್ಲೇ

ಸ್ಕೂಲ್


3) ಅಲಿಶಾ ಮತ್ತು ಪ್ರಣ್ವಿ.

ಶ್ರೀ ಸಾಯಿ ಕಿಡ್ಜೋನ್ ಪ್ಲೇ ಸ್ಕೂಲ್


______________________________


 ಶಿಶುವಿಹಾರ ವಿಭಾಗ


1) ಯಶ್ವಿ

ಶ್ರೀ ಸಾಯಿ ಕಿಂಡರ್ ಗಾರ್ಟನ್ ಶಾಲೆ.


2) ಪುನರ್ವಿ

ಶ್ರೀ ಸಾಯಿ ಕಿಂಡರ್ ಗಾರ್ಟನ್ ಶಾಲೆ.


3) ಆರೋಹಿ ಮತ್ತು ಶರ್ವಿ ಎ ಕೆ

ಶ್ರೀ ಸಾಯಿ ಕಿಂಡರ್ ಗಾರ್ಟನ್ ಶಾಲೆ.


______________________________


ಕೆಳ ಪ್ರಾಥಮಿಕ ವಿಭಾಗ


1) ಅಭಿನವ್ ಎಂ .ಪ್ರಭು

LCR ಇಂಡಿಯನ್ ಸ್ಕೂಲ್ ಕಕ್ಯಪದವು.


2) ರಕ್ಷಣ್

LCR ಇಂಡಿಯನ್ ಸ್ಕೂಲ್ ಕಕ್ಯಪದವು.


3) ಧನ್ವಿನ್ ಜಿ.ಪಿ

ಬಂಟ್ವಾಳ.


3) ನಿಹಾರಿಕಾ

ಶ್ರೀರಾಮ ಪ್ರಾಥಮಿಕ ಶಾಲೆ ಕಲ್ಲಡ್ಕ.


______________________________


 ಉನ್ನತ ಪ್ರಾಥಮಿಕ ವಿಭಾಗ


1) ನಿನಾದ ಕೈರಂಗಳ.

ಶ್ರೀರಾಮ ವಿದ್ಯಾಲಯ ಕಲ್ಲಡ್ಕ.


2) ಸ್ಪಂದನಾ ಜೆ.ಶೆಟ್ಟಿ

ಬಿ.ಸಿ.ರೋಡ್.


3) ಅದಿತಿ ಎಂ ಪ್ರಭು

LCR ಇಂಡಿಯನ್ ಸ್ಕೂಲ್ ಕಕ್ಯಪದವು.

______________________________


 ಪ್ರೌಢಶಾಲಾ ವಿಭಾಗ


1) ಸುಕನ್ಯಾ

ಅಗ್ರಾರ್.


2) ಫಾತಿಮತ್ ಸೈಮಾ.

LCR ಇಂಡಿಯನ್ ಸ್ಕೂಲ್.ಕಾಕ್ಯಪದವು.


3) ಸಹನಾ ಜಿ.

ಲೊರೆಟ್ಟೊ ಇಂಗ್ಲಿಷ್ ಮೆಡ್.ಸ್ಕೂಲ್.

Leave a Comment