ಇಂದಿಗೆ ಪಂಚರಾಜ್ಯ ಚುನಾವಣೆ ಮುಕ್ತಾಯ, ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ- ಬಿಜೆಪಿಗೆ ಮುಖಭಂಗವಾಗುವ ಸಾಧ್ಯತೆ.

Coastal Bulletin
ಇಂದಿಗೆ ಪಂಚರಾಜ್ಯ ಚುನಾವಣೆ ಮುಕ್ತಾಯ, ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ- ಬಿಜೆಪಿಗೆ ಮುಖಭಂಗವಾಗುವ ಸಾಧ್ಯತೆ.

ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಡಬಹುದು ಎಂದು ಎಕ್ಸಿಟ್​ ಪೋಲ್ ಸಮೀಕ್ಷೆಗಳು ಸುಳಿವು ನೀಡಿವೆ. ಎಕ್ಸಿಟ್ ಪೋಲ್ ಟ್ರೆಂಡ್‌ಗಳ ಪ್ರಕಾರ ಛತ್ತೀಸ್‌ಗಢದಲ್ಲಿ ಬಿಜೆಪಿ 35-45 ಮತ್ತು ಕಾಂಗ್ರೆಸ್ 40-50 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ.

ತೆಲಂಗಾಣದಲ್ಲಿ ಪೀಪಲ್ಸ್‌ ಪಲ್ಸ್‌ ಸಮೀಕ್ಷೆಯಂತೆ ಕಾಂಗ್ರೆಸ್‌ಗೆ ಬಹುಮತ ದೊರೆಯಲಿದೆ. ಕಾಂಗ್ರೆಸ್‌ 62-72, ಬಿಆರ್‌ಎಸ್‌ 35-46, ಎಂಐಎಂ 6-7, ಬಿಜೆಪಿ 3-8 ಸ್ಥಾನ ಗಳಿಸಲಿವೆ. ಇದರೊಂದಿಗೆ ಮೂರು ಸಂಸ್ಥೆಗಳ ಸಮೀಕ್ಷೆಯಲ್ಲಿಯೂ ತೆಲಂಗಾಣದಲ್ಲಿ ಕಾಂಗ್ರೆಸ್​​ಗೇ ಬಹುಮತ ಎಂದಂತಾಗಿದೆ.

ಮಧ್ಯ ಪ್ರದೇಶ, ರಾಜಸ್ಥಾನದಲ್ಲಿ ಬದಲಾಗಲಿದೆ ಸರ್ಕಾರ.ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇಲ್ಲಿಯವರೆಗಿನ ಎಕ್ಸಿಟ್ ಪೋಲ್ ಟ್ರೆಂಡ್‌ಗಳು ಪ್ರಕಟವಾಗಿವೆ. ಎರಡೂ ರಾಜ್ಯಗಳಲ್ಲಿ ಸರ್ಕಾರ ಬದಲಾವಣೆಯಾಗುವ ಸಾಧ್ಯತೆ ಇದೆ. ಶಿವರಾಜ್ ಸಿಂಗ್ ಸ್ಥಾನ ಕಳೆದುಕೊಳ್ಳಬಹುದು, ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದು ಎನ್ನಲಾಗಿದೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರು ಅಧಿಕಾರ ಕಳೆದುಕೊಳ್ಳಬಹುದು ಎಂದು ಎಕ್ಸಿಟ್​​ ಪೋಲ್​ಗಳು ಅಂದಾಜಿಸಿವೆ.

ಮಿಝೋರಂ ನಲ್ಲಿ ರಾಷ್ಟ್ರೀಯ ಪಕ್ಷಗಳು ನೆಪಮಾತ್ರಕ್ಕೆ ಫೈಟ್ ನೀಡಲಿದ್ದು, ಪ್ರಾದೇಶಿಕ

ಪಕ್ಷಗಳದ್ದೇ ಅಸಲಿ ಹೋರಾಟ ಇರಲಿದೆ. ಮಿಜೋ ನ್ಯಾಷನಲ್ ಫ್ರಂಟ್, ಜೋರಾಮ್ ಪೀಪಲ್ಸ್ ಮೂವ್ಮೆಂಟ್ ನಡುವೆ ನೇರ ಪೈಪೋಟಿ ಇದೆ. ಈ ರಾಜ್ಯದಲ್ಲಿ ಸ್ಥಳೀಯ ವಿಷಯ ಮುಂದಿಟ್ಟು MNF ಅಧಿಕಾರಕ್ಕೆ ಬಂದಿತ್ತು. ಇಲ್ಲಿನ ಜನರು ಸಹ ಪ್ರಾದೇಶಿಕ ಪಕ್ಷಕ್ಕೆ ಆದ್ಯತೆ ನೀಡುತ್ತಾ ಬಂದಿದ್ದಾರೆ. ಕಳೆದ ಬಾರಿ 26 ಸ್ಥಾನ MNF ಗೆದ್ದಿದ್ದು, 8 ಸ್ಥಾನಗಳನ್ನು ZPM ಗೆದ್ದಿತ್ತು. ಕಾಂಗ್ರೆಸ್ 5, ಬಿಜೆಪಿ 1 ಸ್ಥಾನವನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿದ್ದವು. ಈ ಬಾರಿಯೂ ಸ್ಥಳೀಯ ವಿಷಯಗಳ ಮೇಲೆಯೇ ಪ್ರಾದೇಶಿಕ ಪಕ್ಷಗಳ ನಡುವೆ ಹೋರಾಟ ನಡೆದಿದೆ.

ಚಾಣಾಕ್ಯ ಸಮೀಕ್ಷೆ ಪ್ರಕಾರ ಎಲ್ಲಾ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಲಿದೆ.

Leave a Comment