ಕೊರೊನಾ ಸೋಂಕಿನ ಏರಿಕೆ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವನ್ನು ಜುಲೈ 17 ರಿಂದ 21ರ ವರೆಗೆ ಐದು ದಿನಗಳ ಅವಧಿಗೆ ಮತ್ತೆ ತೆರೆಯಲಾಗುತ್ತಿದೆ ಎಂದು ತಿರುವಾಂಕುರ್ ದೇವಸ್ವಂ ಮಂಡಳಿ ತಿಳಿಸಿದೆ.
ಕೊರೊನಾ ಹೊಸ ಮಾರ್ಗಸೂಚಿಗಳ ಪ್ರಕಾರ ಲಸಿಕೆ ಪಡೆದ ಸರ್ಟಿಫಿಕೇಟ್ ಅಥವಾ 48 ಗಂಟೆಗಳೊಳಗೆ ಟೆಸ್ಟ್ ಮಾಡಿಸಿದ ಕೋವಿಡ್-19 ಆರ್’ಟಿಪಿಸಿಆರ್ ನೆಗೆಟಿವ್
ರಿಪೋರ್ಟ್ ಕಡ್ಡಾಯವಾಗಿದೆ. ಅಲ್ಲದೆ ಆನ್‍ಲೈನ್ ಮೂಲಕ ಬುಕಿಂಗ್ ಮಾಡಿಕೊಂಡ ಗರಿಷ್ಠ 5 ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
Advertisement