Coastal Bulletin

ಡಿಕೆ ಶಿವಕುಮಾರ್ ರೌಡಿ ಮಾತ್ರವಲ್ಲ,ಕೆಟ್ಟ ಚಾಳಿಗಳಿಗೆ ಆತ ಪ್ರೇರಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್,ಡಿ.ಕೆ.ಶಿವಕುಮಾರ್ ಕಾರ್ಯಕರ್ತನ ಮೇಲೆ ಕೈ ಮಾಡಿರುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಕಾರ್ಯಕರ್ತರು ನಾಯಕರ ಬಳಿ ಅಪೇಕ್ಷೆ ಮತ್ತು ಬೇಡಿಕೆಯಿಟ್ಟು ಬರುತ್ತಾರೆ, ಅವರ ಮೇಲೆ ಹಲ್ಲೆ ಮಾಡುವುದು ಸರಿಯಾದ

ಸಂಸ್ಕೃತಿ ಅಲ್ಲ ಎಂದು ನಳಿನ್ ಹೇಳಿದ್ರು. ಸಿದ್ಧರಾಮಯ್ಯನವರು ಹಿಂದೆ ತೊಡೆ ತಟ್ಟಿ ವಿಧಾನಸೌಧ ಪ್ರವೇಶಿಸಿದ್ರು, ದೇವಾಲಯದಂತೆ ಪೂಜಿಸಲ್ಪಡುವ ವಿಧಾನಸೌಧಕ್ಕೆ ಅಗೌರವ ತೋರಿದವರು,ಕಾರ್ಯಕರ್ತರಿಗೆ ಗೌರವ ಕೊಡ್ತಾರ ಎಂದು ನಳಿನ್ ಪ್ರಶ್ನಿಸಿದ್ರು.


Leave a Comment