ಮಂಗಳೂರು: ಪ್ರತಿಭೆಯು ಎಲ್ಲರಲ್ಲೂ ಅಡಕವಾಗಿರುತ್ತದೆ. ಆದರೆ ಆ ಪ್ರತಿಭೆಯನ್ನು ಒರೆಗೆ ಹಚ್ಚಿ ಪ್ರದರ್ಶನಕ್ಕಿಡುವವರು ಕೆಲವೇ ಮಂದಿ ಮಾತ್ರ. ಹೆಚ್ಚಿನವರು ಒಂದೋ ಎರಡೋ ವಿಚಾರದಲ್ಲಿ ಪ್ರತಿಭಾಶಾಲಿಗಳಾಗಿರುತ್ತಾರೆ. ಆದರೆ ಇಲ್ಲೊಬ್ಬಳು ಕುಡ್ಲದ ಕುವರಿ ಭರತನಾಟ್ಯ, ಹುಲಿವೇಷ ನರ್ತನ ಮಾತ್ರವಲ್ಲದೆ ಕ್ರೀಡೆಯಲ್ಲೂ ಆಸಕ್ತಳಾಗಿದ್ದು, ಥ್ರೋಬಾಲ್, ಸ್ವಿಮ್ಮಿಂಗ್ ಅಥ್ಲೆಟಿಕ್ ನಲ್ಲಿಯೂ ಸಾಧನೆ ಮೆರೆದಿದ್ದಾಳೆ.
ಮಂಗಳೂರಿನ ಪಾಂಡೇಶ್ವರದ ಎ.ಸದಾಶಿವ ಕುಲಾಲ್ ಹಾಗೂ ಚಂದ್ರಪ್ರಭಾ ದಂಪತಿಯ ಪುತ್ರಿ ಸಿಂಚನಾ ಕುಲಾಲ್ ಎಂಬಾಕೆಯೇ ಈ ಪ್ರತಿಭಾ ಸಂಪನ್ನೆ. ಸಣ್ಣ ವಯಸ್ಸಿನಲ್ಲಿಯೇ ನೃತ್ಯದಲ್ಲಿ ಆಸಕ್ತಳಾದ ಸಿಂಚನಾ ಕುಲಾಲ್ ಭರತನಾಟ್ಯವನ್ನು ತಮ್ಮ ಮೂರನೇ ತರಗತಿಯಿಂದಲೇ ಅಭ್ಯಸಿಸಲು ತೊಡಗಿದ್ದಾರೆ. ಭರತನಾಟ್ಯದಲ್ಲಿ ಸೀನಿಯರ್ ಹಂತವನ್ನು ಪ್ರಥಮಶ್ರೇಣಿಯಲ್ಲಿ ಪೂರೈಸಿದ್ದು, ಇದೀಗ ವಿದ್ವತ್
ಪೂರ್ವ ಹಂತವನ್ನು ಅಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯದಲ್ಲಿಯೇ ಸಾಧನೆ ಮಾಡುವ ಗುರಿ ಹೊಂದಿರುವ ಸಿಂಚನಾ ಅವರು ಮುಂದೆ ಭರತನಾಟ್ಯವನ್ನೇ ವಸ್ತವಾಗಿರಿಸಿ ಪಿಎಚ್ ಡಿ ಅಧ್ಯಯನ ಮಾಡುವ ಬಯಕೆ ಹೊಂದಿದ್ದ ಈಕೆ ಸನಾತನ ನಾಟ್ಯಾಲಯದ ವಿದುಷೀ ಶಾರದಾ ಮಣಿ ಶೇಖರ್ ಮತ್ತು ಶ್ರೀ ಲತಾ ನಾಗರಾಜ್ ಅವರ ಶಿಷ್ಯೆ.














