Coastal Bulletin

ಮಂಗಳೂರು:ತನ್ನ ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ 3 ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದ ಸುರತ್ಕಲ್ ನ ವಿಕೃತ ಕಾಮುಕ ಅಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಜಳಿಗೆ ಸದಾ ಹೊಡೆದು ಕಿರುಕುಳ ನೀಡುತ್ತಿದ್ದ ಈತ ಸಮಯ ಸಾಧಿಸಿ ಮಕ್ಕಳ ಮೇಲೆಯೇ ಅತ್ಯಾಚಾರ ನಡೆಸುತ್ತಿದ್ದ. 

ಇತ್ತೀಚೆಗೆ ಪತ್ನಿ ಮತ್ತು ಹೆಣ್ಣುಮಕ್ಕಳಿಗೆ ಹಲ್ಲೆ ನಡೆಸಿದ್ದು ಅವರು

ತವರು ಮನೆಗೆ ತೆರಳಿದ್ದರು. ಈ ಸಂದರ್ಭ ಹೆಣ್ಣುಮಕ್ಕಳು ಮಾವನ ಬಳಿ ಈ ವಿಚಾರ ಹೇಳಿಕೊಂಡಿದ್ದರು. 

ಬಳಿಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Comment