ಭೋಪಾಲ್ :ಕೋವಿಡ್–19 ಲಸಿಕೆ ಪಡೆದರೆ ಉಚಿತವಾಗಿ ಮೊಬೈಲ್ ರೀಚಾರ್ಜ್ ನೀಡುವ ಮೂಲಕ ಲಸಿಕಾ ಅಭಿಯಾನವನ್ನು ಚುರುಕುಗೊಳಿಸುವ ತಂತ್ರವನ್ನು ಭೋಪಾಲ್‌ನ ಬೇರಸಿಯ ವಿಧಾನಸಭಾ ಕ್ಷೇತ್ರದ ಶಾಸಕ ವಿಷ್ಣು ಖತ್ರಿ ಅನುಸರಿಸುತ್ತಿದ್ದಾರೆ.
ಜೂನ್ 30 ರೊಳಗೆ ಕೊರೊನಾ ಲಸಿಕೆ ಹಾಕಿಸಿಕೊಂಡ ಜನರಿಗೆಲ್ಲಾ ಮೊಬೈಲ್‌ಗೆ ಉಚಿತ ರೀಚಾರ್ಜ್ ಮಾಡಿಸುವುದಾಗಿ ಅದರೊಂದಿಗೆ ತಮ್ಮ ಕ್ಷೇತ್ರದಲ್ಲಿ ಯಾವ ಪಂಚಾಯತ್ ಮೊದಲು ಶೇ.100 ರಷ್ಟು ಲಸಿಕಾಕರಣದ ಗುರಿ ಸಾಧಿಸುತ್ತದೆಯೋ, ಅದಕ್ಕೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿಯೂ ಖತ್ರಿ ಅವರು ಘೋಷಿಸಿದ್ದಾರೆ.
ನನ್ನ ಕ್ಷೇತ್ರದಲ್ಲಿ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳೇ
ಇವೆ.ಇಲ್ಲಿನ ಜನರಲ್ಲಿ ಲಸಿಕೆ ಬಗ್ಗೆ ತುಂಬಾ ಗೊಂದಲ ಇರುವುದರಿಂದ ಅಭಿಯಾನ ನಿಧಾನಗತಿಯಲ್ಲಿ ಸಾಗುತ್ತಿದೆ.ಗ್ರಾಮಸ್ಥರಲ್ಲಿ ಲಸಿಕೆಯ ಕುರಿತು ಇರುವ ತಪ್ಪು ಪರಿಕಲ್ಪನೆಗಳನ್ನು ಹೋಗಲಾಡಿಸುವ ಸಂಬಂಧ ಈ ಕಾರ್ಯತಂತ್ರ ರೂಪಿಸಲಾಗಿದ್ದು,ಹೆಚ್ಚು ಹೆಚ್ಚು ಜನರು ಲಸಿಕೆ ಹಾಕಿಸಿಕೊಳ್ಳಲಿ ಎಂದು ನಾನು ಅವರಿಗೆ ಮೊಬೈಲ್ ರೀಚಾರ್ಜ್ ಮಾಡಿಸುವುದಾಗಿ ಘೋಷಿಸಿದ್ದೇನೆ ಎಂದು ವಿಷ್ಣ ಖತ್ರಿ ತಿಳಿಸಿದ್ದಾರೆ.














