ಕಾಸರಗೋಡು: ಹಿಂದೂ ಯುವ ನಾಯಕ ಜ್ಯೋತಿಷ್ ಕುಮಾರ್ ಇಂದು ಬೆಳಗಿನ ಜಾವಾ ಅಕಾಲಿಕ ನಿಧನರಾಗಿದ್ದಾರೆ.
ಜಿಲ್ಲೆಯಾದ್ಯಂತ ಚಿರಪರಿಚಿತರಾಗಿದ್ದ ಇವರ ಪಾರ್ಥಿವ ಶರೀರವನ್ನು ಮಧ್ಯಾಹ್ನ 12 ಗಂಟೆಗೆ ಬಿಎಂಎಸ್ ಕಚೇರಿ ಆವರಣಕ್ಕೆ ತಂದು
ನಂತರ 12:30 ಗಂಟೆಗೆ ಜೆ.ಪಿ. ಕಾಲೋನಿ ಮೈದಾನದಕ್ಕೆ ತರುತ್ತಾರೆ. ನಂತರ ಪರಕಟ್ಟೆ ರುದ್ರ ಭೂಮಿಯಲ್ಲಿ ಸಮಾಧಿ ಮಾಡಲಾಗುವುದು ಎಂದು ತಿಳಿದುಬಂದಿದೆ.














