Coastal Bulletin

ಕೇರಳ: ಈ ಬಾರಿಯ ಓಣಂ ಬಂಪರ್ ಲಾಟರಿ 25 ಕೋಟಿ ಲಾಟರಿ ಆಟೋ ಚಾಲಕನ ಪಾಲಾಗಿದೆ.

ಓಣಂ ಬಂಪರ್ 2022 (BR-87) ಅಥವಾ ತಿರುವೋಣಂ ಬಂಪರ್ ಫಲಿತಾಂಶಗಳನ್ನು ಕೇರಳ ರಾಜ್ಯ ಲಾಟರಿ ಇಲಾಖೆ ಪ್ರಕಟಿಸಿದೆ. ಭಾನುವಾರ ಮಧ್ಯಾಹ್ನ 2 ಗಂಟೆಗೆ ಘೋಷಿಸಲಾದ ಬಹುಮಾನಗಳಲ್ಲಿ ತಿರುವನಂತಪುರದಲ್ಲಿ ಮಾರಾಟವಾದ ಟಿಕೆಟ್‌ನಲ್ಲಿ 25 ಕೋಟಿ ರೂಪಾಯಿಗಳ ಮೊದಲ ಬಹುಮಾನ ಬಂದಿದೆ.

ಅನೂಪ್(32) ಟಿವಿಎಂ ಆಟೋ ರಿಕ್ಷಾ ಚಾಲಕ ಮತ್ತು ಬಹುಮಾನ ವಿಜೇತ

ಎಂದು ಗುರುತಿಸಲಾಗಿದೆ. ವಿಜೇತ ಟಿಕೆಟ್ ನ್ನು ತಿರುವನಂತಪುರದ ಪಜವಂಗಡಿ ಭಗವತಿ ಏಜೆನ್ಸಿ ಮಾರಾಟ ಮಾಡಿದೆ.ಇನ್ನು ಎರಡನೇ ಬಹುಮಾನ 5 ಕೋಟಿ ಕೊಟ್ಟಾಯಂ‌ ಜಿಲ್ಲೆಯ ವ್ಯಕ್ತಿಗೆ ಸಿಕ್ಕಿದೆ.

ಅನೂಪ್‌ ಆಟೋ ಚಾಲಕನಾಗಿದ್ದು,ಬಡತನದಿಂದಿದ್ದ, ಡ್ರಾಗೆ ಒಂದು ದಿನ‌ ಮೊದಲು ಟಿಕೆಟ್ ಖರೀದಿಸಿದ್ದ ಎನ್ನಲಾಗಿದೆ. ಇದೀಗ ಲಾಟರಿ ಹೊಡೆದು ಅನೂಪ್ ಕೋಟ್ಯಾದೀಶರಾಗಿದ್ದು, ಸಂತಸವನ್ನು ಹಂಚಿಕೊಂಡಿದ್ದಾರೆ.

Leave a Comment