Coastal Bulletin

ಬಂಟ್ವಾಳ :ಕರ್ನಾಟಕ ಸರಕಾರ ಯುವಜನಾ ಕ್ರೀಡೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ,ರಾಯಿ ಗ್ರಾಮ ಪಂಚಾಯತ್ ಆಶ್ರಯದಲ್ಲಿ 18 ವರ್ಷದ ಮೇಲ್ಪಟ್ಟ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾಟ ಮತ್ತು ಖೋ ಖೋ ಪಂದ್ಯಾಟ ಗ್ರಾಮೀಣ ಕ್ರೀಡಾಕೂಟ ಸರಕಾರಿ ಪ್ರೌಢ ಶಾಲೆ ಕೊಯಿಲದಲ್ಲಿ ಇತ್ತೀಚೆಗೆ ನೆರವೇರಿತು.

ಈ ಕಾರ್ಯಕ್ರಮವನ್ನು ಗ್ರಾ ಪಂ. ಅಧ್ಯಕ್ಷೆ ಶ್ರೀಮತಿ ರತ್ನಾ ಆನಂದ ಉದ್ಘಾಟಿಸಿ ಶುಭ ಹಾರೈಸಿದರು. ಉಪಾಧ್ಯಕ್ಷರಾದ ರಶ್ಮಿತ್ ಶೆಟ್ಟಿ ಕೈತ್ರೋಡಿ, ಅಕ್ರಮ‌ ಸಕ್ರಮ ಸಮಿತಿ ಸದಸ್ಯರು ರಮಾನಾಥ ರಾಯಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರು ವಸಂತ್ ಕುಮಾರ್ ಅಣ್ಣಳಿಕೆ, ಪಂಚಾಯತ್ ಅಭಿವೃದ್ಧಿ

ಅಧಿಕಾರಿ ಮಧು ಟಿ ಎಲ್, ದೈಹಿಕ ಶಿಕ್ಷಕರು ಜನಾರ್ಧನ, ದಯಾನಂದ ಸಪಲ್ಯ, ಪರಮೇಶ್ವರ ಪೂಜಾರಿ, ಚಂದ್ರಶೇಖರ ಗೌಡ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸಂತೋಷ್ ಕುಮಾರ್ ರಾಯಿ ಬೆಟ್ಟು, ರವೀಂದ್ರ ಪೂಜಾರಿ, ದಿನೇಶ್ ಶೆಟ್ಟಿ, ಸಂತೋಷ್ ಗೌಡ, ಪುಷ್ಪವತಿ, ಗುಣವತಿ ಉಪಸ್ಥಿತರಿದ್ದರು.‌ ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Leave a Comment