ಕೊಚ್ಚಿ: ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ಸೌಲಭ್ಯ ದ ಜೊತೆಗೆ, ಅವರ ವೃತ್ತಿಜೀವನಕ್ಕೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಉದ್ಯೋಗದಾತರದ್ದು ಎಂದು ಕೇರಳ ಹೈಕೋರ್ಟ್ ಸೂಚಿಸಿದೆ.
ಮೂವರು ಗುತ್ತಿಗೆ ಉದ್ಯೋಗಿಗಳಿಗೆ ಹೆರಿಗೆ ಸೌಲಭ್ಯ ನೀಡಲು ಕೇರಳ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ ಕೇರಳ ಹೈಕೋರ್ಟ್, ಮಹಿಳಾ ಉದ್ಯೋಗಿಗಳ ವೃತ್ತಿಪರ ವೃತ್ತಿಜೀವನಕ್ಕೆ ಹೆರಿಗೆ ಕಾರಣದಿಂದ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಉದ್ಯೋಗದಾತರಿಗೆ ಇದೆ ಎಂದು ಅಭಿಪ್ರಾಯಪಟ್ಟಿದೆ.
ಮಹಿಳಾ ಉದ್ಯೋಗಿಗಳೆಂಬ ಕಾರಣಕ್ಕೆ ಅವರ ಬಗ್ಗೆ ಸಹಾನುಭೂತಿ ಹೊಂದಿರಬೇಕು. ಕೆಲಸದ ಸ್ಥಳದಲ್ಲಿ ಅವರ ಘನತೆಯನ್ನು ಕಡಿಮೆ ಮಾಡಬಾರದು. ಗುತ್ತಿಗೆ ಆಧಾರದ ಮೇಲೆ
ನೇಮಕಗೊಂಡ ಮೂವರು ಸಿಬ್ಬಂದಿಗೆ ಹೆರಿಗೆ ಸೌಲಭ್ಯ ನೀಡಬೇಕು ಎಂದು ರಾಜ್ಯ ಸರ್ಕಾರ ಮತ್ತು ಕೇರಳ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸುವ ಸಂದರ್ಭದಲ್ಲಿ ಕೇರಳ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.
KUHS ನಲ್ಲಿ ಪ್ರೋಗ್ರಾಮರ್ ಗಳಾಗಿರುವ ಅರ್ಜಿದಾರರಾದ ಬಿ. ನಾಜಿಯಾ, ಎಂ.ಎಸ್. ಧನ್ಯಾ ಮತ್ತು ಜಿನ್ಸಿ ಪಿ. ಫ್ರಾನ್ಸಿಸ್ ಅವರು ಹೆರಿಗೆ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಅವರಿಗೆ ಸೌಲಭ್ಯ ಕಲ್ಪಿಸಬೇಕೆಂದು ಕೋರ್ಟ್ ತಿಳಿಸಿದೆ.
















