Coastal Bulletin

ಬಂಟ್ವಾಳ: ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಕ್ರಮ ಮರಳು ಗಾರಿಕೆಯನ್ನು ವಿರೋಧಿಸಿ ಪೆರಾಜೆ ಗ್ರಾಮದ ಬುಡೋಳಿ ಜಂಕ್ಷನ್ ನಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.ಮಾಜಿ ಸಚಿವ ರಮಾನಾಥ ರೈ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್,ಚಂದ್ರಪ್ರಕಾಶ್ ಶೆಟ್ಟಿ,ಎಂ ಎಸ್ ಮೊಹಮ್ಮದ್,ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ,ಮಾಜಿ

ಎಪಿಎಂಸಿ ಅಧ್ಯಕ್ಷರಾದ ಪದ್ಮನಾಭ ರೈ, ಪಿಯೂಸ್ ಎಲ್ ರೊಡ್ರಿಗಸ್,ಮಾಣಿ ಗ್ರಾ ಪಂ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ,ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಪೂಜಾರಿ ಜೋರ,ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್,ಉಮಾನಾಥ್ ಶೆಟ್ಟಿ, ಜಯಂತಿ ವಿ ಪೂಜಾರಿ,ಕುಶಲ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.

Leave a Comment