Coastal Bulletin

ಬಾಯಾರು : ದಯಾ ಕ್ರಿಯೇಷನ್ ಬಾಯಾರು ಇದರ 2ನೇ ವರ್ಷದ ಸಂಭ್ರಮಾಚರಣೆ ದಯಾ ಮೆಲೋಡೀಸ್ ಮ್ಯೂಸಿಕಲ್ ಕಾರ್ಯಕ್ರಮ ಜ. 08ರ ಆದಿತ್ಯವಾರ ಕಾಳಿಕಾಂಬ ಆಂಜನೇಯ ದೇವಸ್ಥಾನ ಕುಕ್ಕಾಜೆ ಮಾಣಿಲದಲ್ಲಿ ನಡೆಯಿತು.

ಬೆಳಿಗ್ಗೆ 10 ಗಂಟೆಗೆ  ಸತ್ಯನಾರಾಯಣ ಪೂಜೆ ಮತ್ತು ಶ್ರೀದೇವಿಗೆ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.

ಸಭಾ ಕಾರ್ಯಕ್ರಮಕ್ಕೆ ಕುಕ್ಕಾಜೆ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ಸಭಾಧ್ಯಕ್ಷತೆಯನ್ನು ಶ್ರೀಮತಿ ವನಿತಾ ತಾರಿದಾಳ ವಹಿಸಿದ್ದರು.

ಅಥಿತಿಗಳಾಗಿ ಕೆ.ಮಹೇಂದ್ರ ನಾಥ್ ಸಾಲೆತ್ತೂರು ಕನ್ನಡ ತುಳು ಕವಿ ಸಾಹಿತಿ ವಾಗ್ಮಿ ವಿಮರ್ಷಕ,ತುಳು ಸಾಹಿತ್ಯ ರತ್ನ,ಜೋಗಿ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತೆರ್, ವಿಜಯ ಕುಮಾರ್ ಜೈನ್ , ಅಳದಂಗಡಿ (ಅಮಂತ್ರಣ ಪರಿವಾರ ನಮ್ಮ ಕುಡ್ಲ ಚಾನೆಲ್ ನ ನ್ಯೂಸ್ ರಿಡರ್ ಡಾ.

ಪ್ರಿಯಾ ಹರೀಶ್, ಕಾಂತಾರ ಖ್ಯಾತಿಯ ಪುಷ್ಪರಾಜ್ ಬೊಳ್ಳಾರ್, ಶ್ರೀಧರ್ ಬಾಲಕಲ್ಲು (ಕಾರ್ಯದರ್ಶಿ ಜೀರ್ಣೋದ್ಧಾರ ಸಮೀತಿ ಶ್ರೀ ಕ್ಷೇತ್ರ ಕುಕ್ಕಾಜೆ),  ರೀತೇಶ್ ಅಂಚನ್,  ಕೃಷ್ಣಪ್ಪ ಪೂಜಾರಿ ಪೂಜಾರಿ ತರಿದಾಳ ಅತಿಥಿಯಾಗಿ ಭಾಗವಹಿಸಿದರು. ಹಾಗೂ ದಯಾನಂದ ಅಮೀನ್ ಬಾಯಾರು ರವಿ ಎಸ್ ಎಂ ಕುಕ್ಕಾಜೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರಿ ಕೆ ವಿಲ್ ಪ್ರೆಡ್ ಡಿ ಸೋಜ (ಕನ್ನಡ  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಟಿವಿ9video ಜನ್ರಲಿಸ್ಟ್ ಇವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ  ಕಲಾಪೋಷಕರಿಗೆ & ತಂಡದ ಸದಸ್ಯರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಿತು.ನಂತರ ಸಾಂಸ್ಕೃತಿಕ ವೈಭವ ನಡೆಯಿತು.

Leave a Comment