Coastal Bulletin

ಮೂಡಬಿದಿರೆ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದ.ಕ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ -2 ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ದ.ಕ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕ ಅಂಗನವಾಡಿ ಯಲ್ಲಿ ಮಳೆ ನೀರು ಕೊಯ್ಲು ಮತ್ತು ಬೂದು ನೀರು ನಿರ್ವಹಣೆ ಬಗ್ಗೆ ಪ್ರೇರೇಪಣಾ ಕಾರ್ಯಗಾರವನ್ನು ಜ.09ರಂದು ಸೋಮವಾರ ಆಯೋಜಿಸಲಾಗಿತ್ತು.

ಈ ತರಬೇತಿಯಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಅಂಗನವಾಡಿ  ಕಾರ್ಯಕರ್ತೆಯರು, ಸೇರಿ ಒಟ್ಟು  ೧೭ಮಂದಿ ಭಾಗವಹಿಸಿದ್ದರು. ಜಲ ಜೀವನ್  ಮಿಷನ್ ನ  ಅನುಷ್ಠಾನ ಬೆಂಬಲ ಸಂಸ್ಥೆಯ

ISAR ಸಿಬ್ಬಂದಿಯಾದ  ಶ್ರೀಮತಿ ಚಿತ್ರ ಜಲಜೀವನ್ ಮಿಷನ್ ಯೋಜನೆಯ ಬಗ್ಗೆ ಮತ್ತು ಬೂದು ನೀರು ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮವನ್ನು ಆಯೋಜಿಸಿ    ಯಶಸ್ವಿಗೊಳಿಸಿದರು.

Leave a Comment