ಬಾಯಾರು : 41ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಜೃಂಭಣೆಯಿಂದ ಸಮಾಪನ.

Coastal Bulletin
ಬಾಯಾರು : 41ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಜೃಂಭಣೆಯಿಂದ ಸಮಾಪನ.

ಕಾಸರಗೋಡು :ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ)ಬಾಯಾರು ಮುಳಿಗದ್ದೆ ಇದರ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಈ ಶುಭ ಸಂದರ್ಭದಲ್ಲಿ ಊರ ಪರವೂರ ಭಕ್ತ ಬಂಧುಗಳ ಸಹಕಾರದೊಂದಿಗೆ  ನಿರ್ಮಾಣಗೊಳ್ಳುತ್ತಿರುವ  ಶ್ರೀ ಗಣೇಶ ಮಂದಿರದ ಬಗ್ಗೆ ಮನವಿಪತ್ರವನ್ನು ಬಿಡುಗಡೆ ಮಾಡಲಾಯಿತು. ಶ್ರೀ ರಾಮ ಕಾರಂತ ಪದ್ಯಾಣ ನಿವೃತ್ತ ಪ್ರಧಾನ ಅರ್ಚಕರು ಶ್ರೀ ಪಶುಪತಿನಾಥ ದೇವಸ್ಥಾನ ನೇಪಾಳ ಇವರು ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ ಉಪಸ್ಥಿತರಿದ್ದರು . ಸತೀಶ್ ಕುಂಪಲ ಜಿಲ್ಲಾಧ್ಯಕ್ಷರು ಬಿಜೆಪಿ ದಕ್ಷಿಣ ಕನ್ನಡ ಶುಭ ನುಡಿದರು.

ಸಂಜೆ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ  ಶ್ಯಾಮ ಸೂರ್ಯ ಮುಳಿಗದ್ದೆ ಅಧ್ಯಕ್ಷತೆ ವಹಿಸಿದರು. ಜಯಲಕ್ಷ್ಮಿ ಕಾರಂತ ಮಂಗಲ್ಪಾಡಿ ಧಾರ್ಮಿಕ

ಉಪನ್ಯಾಸದ ಮೂಲಕ ಮಾರ್ಗದರ್ಶನವಿತ್ತರು. ಬಾಲಕೃಷ್ಣ ಶೆಟ್ಟಿ ಹಿರಣ್ಯ ಕಂಬಳಗುತ್ತು ತರವಾಡು ಮನೆ, ರಾಮಚಂದ್ರ ಹಾಳೆಮೂಲೆ ಕರ್ನಾಟಕ ಬೇಂಕ್ ಮೆನೇಜರ್, , ರಾಮ .ಬಿ ಅಂಗಡಿಮಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಹೆದ್ದಾರಿ ಶಾಲಾ ಮೆನೇಜರ್  ರಾಜೇಶ್ .ಯನ್,ಸಮಿತಿಯ ಪದಾಧಿಕಾರಿಗಳಾದ ಪದ್ಮನಾಭ ನಾಯಕ್ ಮುಳಿಗದ್ದೆ,ವಸಂತ ಕಲ್ಲಗದ್ದೆ,ರಾಜೇಶ್ ಮಾರು ಸುಣ್ಣಾಡ ಉಪಸ್ಥಿತರಿದ್ದರು. 

ಕುಮಾರಿ ದಿಶಾ ಪೆರ್ವಡಿ ಪ್ರಾರ್ಥಿಸಿ ಸಮಿತಿಯ ಕಾರ್ಯದರ್ಶಿ ಹರಿಣಾಕ್ಷ ಬದಿಯಾರು ಸ್ವಾಗತಿಸಿ,ಶ್ರೀಧರ ಬದಿಯಾರು ವಂದಿಸಿ, ಶೇಖರ ಶೆಟ್ಟಿ ಬಾಯಾರು ನಿರೂಪಿಸಿದರು.ನಂತರ ಹೆದ್ದಾರಿ ಶಾಲೆಯಿಂದ ಹೊರಟ ಗಣೇಶನ ಭವ್ಯ ಶೋಭಾಯಾತ್ರೆ ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದ ಸರೋವರದಲ್ಲಿ ಮೂರ್ತಿಯ ಜಲಸ್ಥಂಭನೆಯೊಂದಿಗೆ ಸಮಾಪನಗೊಂಡಿತು.

Leave a Comment