ಬೆಂಜನಪದವು: ಸೆ.3-4ರಂದು 27ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಲೀಲೋತ್ಸವ.

Coastal Bulletin
ಬೆಂಜನಪದವು: ಸೆ.3-4ರಂದು 27ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಲೀಲೋತ್ಸವ.

ಬಂಟ್ವಾಳ :ಶ್ರೀ ಕೃಷ್ಣ ಸೇವಾ ಸಮಿತಿ ಟ್ರಸ್ಟ್ (ರಿ.) ಛತ್ರಪತಿ ಶಿವಾಜಿ ಶಾಖೆ ಶಿವಾಜಿನಗರ ಬೆಂಜನಪದವು ಇವರ ಆಶ್ರಯದಲ್ಲಿ  27ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಲೀಲೋತ್ಸವ ಕಾರ್ಯಕ್ರಮವು ಸೆ.03 ಮತ್ತು 04ರಂದು ಶುಭಲಕ್ಷ್ಮೀ ಸಭಾಂಗಣ, ಶಿವಾಜಿನಗರ ಬೆಂಜನಪದವು ಇಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮಗಳು :

ಸೆ 3ನೇ ಗುರುವಾರ ಬೆಳಿಗ್ಗೆ ಗಂಟೆ 11-00ಕ್ಕೆ ಧ್ವಜಾರೋಹಣ, ಸಂಜೆ 3.15ರಿಂದಶ್ರೀ ಕೃಷ್ಣ ವೇಷ ಸ್ಪರ್ಧೆ ಸಂಜೆ ಗಂಟೆ 4.30ರಿಂದ  ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ಸಂಜೆ ಗಂಟೆ 5.30ಕ್ಕೆ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ರಾತ್ರಿ

8.00ಕ್ಕೆ  ಪಿಂಗಾರ ಕಲಾವಿದರ್ ಬೆದ್ರ ತಂಡದಿಂದ ಕದಂಬ ನಾಟಕ.

ಸೆ.4ನೇ ಶುಕ್ರವಾರ ಬೆಳಿಗ್ಗೆ ಗಂಟೆ 8-45ಕ್ಕೆ ದೀಪ ಪ್ರಜ್ವಲನೆ, ಭಜನಾ ಕಾರ್ಯಕ್ರಮ ಮಧ್ಯಾಹ್ನ ಗಂಟೆ 12-30ಕ್ಕೆ ಶ್ರೀ ಕೃಷ್ಣ ದೇವರಿಗೆ ಮಹಾಪೂಜೆ, ಸಂಜೆ ಗಂಟೆ 5-30ರಿಂದ ಶ್ರೀ ಕೃಷ್ಣ ದೇವರ ವೈಭವದ ಶೋಭಾಯಾತ್ರೆ.ನಡೆಯಲಿದೆ.

Leave a Comment