ತುಂಬೆ: ಸೆ 6ರಂದು ಭಾಗ್ಯೋದಯ ಮಿತ್ರ ಕಲಾ ವೃಂದದ ನವೀಕೃತ ಕಟ್ಟಡ ಉದ್ಘಾಟನೆ. ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆ.   

Coastal Bulletin
ತುಂಬೆ: ಸೆ 6ರಂದು ಭಾಗ್ಯೋದಯ ಮಿತ್ರ ಕಲಾ ವೃಂದದ ನವೀಕೃತ ಕಟ್ಟಡ ಉದ್ಘಾಟನೆ. ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆ.   

ಬಂಟ್ವಾಳ :ಭಾಗ್ಯೋದಯ ಮಿತ್ರ ಕಲಾ ವೃಂದ (ರಿ.) ತುಂಬೆ ಇದರ ನವೀಕೃತ ಕಟ್ಟಡ "ಭಾಗ್ಯೋದಯ"ದ ಉದ್ಘಾಟನಾ ಸಮಾರಂಭವು ಸೆ 6ರಂದು ಹನುಮ ನಗರ ತುಂಬೆಯಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 6ಕ್ಕೆ ಗಣಹೋಮ ಬಳಿಕ ಭಜನೆ ಹಾಗೂ 9.30ಗೆ ಉದ್ಘಾಟನಾ ಸಮಾರಂಭ ನಡೆಯಲಿದೆ.11ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ ಬಳಿಕ ಪ್ರಸಾದ ವಿತರಣೆ ಸಹಭೋಜನ ನಡೆಯಲಿದೆ.

ಅಪರಾಹ್ನ 2ರಿಂದ ಅಷ್ಟಮಿ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿಕ್ಕಿದೆ, ಸಂಜೆ ಸಮಾರೋಪ ಸಮಾರಂಭ,ಬಹುಮಾನ ವಿತರಣೆ ಜರುಗಲಿದೆ.

ಬಳಿಕ ಸಂಘ ಸದಸ್ಯರಿಂದ

ವಿವಿಧ ಮನರಂಜನಾ ಕಾರ್ಯಕ್ರಮಗಳು ಹಾಗೂ ಬಲೆ ತೆಲಿಪಾಲೆ ಖ್ಯಾತಿಯ ನಿತಿನ್ ತುಂಬೆ ಸಂಯೋಜನೆಯಲ್ಲಿ ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ "ಬಲೇ ತೆಲಿಪುಗ"ಎಂಬ ವಿನೂತನ ಶೈಲಿಯ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಭಾಗ್ಯೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಯೋಗೀಶ್ ಕಜೆಕಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment