ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ತೆನೆ ಹಬ್ಬ( ಹೊಸ ಅಕ್ಕಿ ಊಟ)ಪುದ್ದರ್ ಆಚರಣೆಯು ಆ.30ರಂದು ಭಾನುವಾರ ನಡೆಯಿತು.
ಶ್ರೀ ಕ್ಷೇತ್ರಕ್ಕೆ ಸಂಭಂದಪಟ್ಟ ಭಕ್ತಾಧಿಗಳು ತೆನೆ ಹಬ್ಬದಲ್ಲಿ ಪಾಲ್ಗೊಂಡು ದೇವರ ಪ್ರಸಾದವೆಂಬಂತೆ ತೆನೆಗಳನ್ನು ಅಲ್ಲದೇ ದೇವರಿಗೆ ಮಾಡಿದ ನೈವೇದ್ಯವನ್ನು ಸಾವಿರ ಸೀಮೆಯ ಭಕ್ತಾಧಿಗಳು ಮನೆಮನೆಗೆ ಕೊಂಡು ಮನೆಯಲ್ಲಿ ಪುದ್ದರ್ ಆಚರಣೆ ಮಾಡಲಾಗುತ್ತದೆ.
ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ವೆಂಕಟೇಶ್ ತಂತ್ರಿ,
ಪ್ರಧಾನ ಅನುವಂಶಿಕ ಮೊಕ್ತೇಸರ ಮಾಧವ ಭಟ್ ಪೊಳಲಿ, ಆಡಳಿತ ಮೊಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ದೇವಾಲಯದ ಪ್ರಧಾನ ಅರ್ಚಕರಾದ ರಾಮ್ ಭಟ್, ಪರಮೇಶ್ವರ ಭಟ್, ಅನಂತ ಭಟ್, ಪದ್ಮನಾಭ ಭಟ್ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್ ಹಾಗೂ ಕ್ಷೇತ್ರದ ಭಕ್ತಾಧಿಗಳು ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.















