ಬಂಟ್ವಾಳ :ಕುಲಾಲ ಸಮಾಜ ರತ್ನ, ನಿವೃತ್ತ ತಹಶೀಲ್ದಾರ್, ಸಹಕಾರಿ ಭೀಷ್ಮ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ(ನಿ) ಪುತ್ತೂರು ಇದರ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾಗಿದ್ದ ಶತಾಯುಷಿ ಬಿ ಎಸ್ ಕುಲಾಲ್ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳು ಸಹಿತ ಅಪಾರ ಬಂಧುವರ್ಗವನ್ನು
ಅಗಲಿದ್ದಾರೆ.ಇಂದು ಸಂಜೆ ಮಾಣಿ ಸಮೀಪ ಪುತ್ರನ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.















