ಬಂಟ್ವಾಳ :ಕುಲಾಲ ಸುಧಾರಕ ಸಂಘ(ರಿ)ಫರಂಗಿಪೇಟೆ ಹಾಗೂ ಕುಲಾಲ ಮಹಿಳಾ ಘಟಕದ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.28ನೇ ಶುಕ್ರವಾರ ಸಂಜೆ ನಾಣ್ಯ ಮಾರಿಪಳ್ಳ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.
ಸಜೀಪ ಕೊಳಕೆ ಶ್ರೀ ಪ್ರದೀಪ್ ಭಟ್ ಇವರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಗಣಹೋಮ,ಸಂಜೆ ಗಂಟೆ 3.00ರಿಂದ ಮಾತೆಯರಿಂದ ಭಜನಾ ಸಂಕೀರ್ತನೆ ಸಂಜೆ 6.00ಕ್ಕೆ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ವಿಜೃಂಭಣೆ ಯಿಂದ ಜರುಗಿತು ಮಹಾಪೂಜೆಯ ಬಳಿಕ ಭಗವದ್ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕಮಲಾ ರಮೇಶ್ ನಾಣ್ಯ, ಉಪಾಧ್ಯಕ್ಷರಾದ ಸುರೇಶ್ ನೆತ್ತರಕೆರೆ,ಕಾರ್ಯದರ್ಶಿ ನವೀನ್ ಚಾಪೆ, ಕೋಶಾಧಿಕಾರಿ
ವಿನಯಕುಮಾರ್ ಕಡೆಗೋಳಿ, ಪ್ರಮುಖರಾದ ಕೆ .ಆರ್ ದೇವದಾಸ್ ಕೊಡ್ಮಾಣ್, ಜಯರಾಮ, ವಿಶ್ವನಾಥ ಕುಲಾಲ್, ಚೇತನ್.ಪಿ.ಕುಲಾಲ್ ಅಡ್ಯಾರ್, ಆನಂದ ಅಡ್ಯಾರ್, ಮೋಹನ್ ಸುಜೀರ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಾರಾಯಣ ಗಂಪದಕೋಡಿ. ಉಮಾಚಂದ್ರಶೇಖರ್. ಉಮಾಲಿಂಗಪ್ಪ ಕುಲಾಲ್ ಕೋಡಿ, ನಯನಾಕ್ಷಿ ಅಡ್ಯಾರ್, ಕುಸುಮ ಆನಂದ ನಾಣ್ಯ, ಸಂಘದ ಹಾಗೂ ಮಹಿಳಾ ಘಟಕದ ಸದಸ್ಯರು. ಕುಲಾಲ ಸೇವಾದಳದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.















