ಬಂಟ್ವಾಳ: ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆ ಅಂಗವಾಗಿ ಆ.30ರಂದು ಬಿಸಿರೋಡಿನ ಹೃದಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಬ್ರಹ್ಮಶ್ರೀ ನಾರಾಯಣಗುರು ವೃತ್ತವನ್ನು ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಾರ್ಪಣೆಗೊಳಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ,ನಾರಾಯಣ ಗುರುಗಳ ಹೆಸರಿನಲ್ಲಿ ವೃತ್ತ ನಿರ್ಮಿಸುವುದು, ಪ್ರತಿಮೆ ಸ್ಥಾಪಿಸುವುದು ಗೌರವದ ಸಂಕೇತವಾದರೂ, ಅವರ ತತ್ವಗಳನ್ನು ನಮ್ಮ ನಡೆ-ನುಡಿಗಳಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ನಾರಾಯಣ ಗುರುಗಳ ಸಂದೇಶಗಳು ಸಮಾಜದ ಪ್ರತಿಯೊಬ್ಬರ ಹೃದಯದಲ್ಲಿ ನೆಲೆಸುವಂತಾಗಬೇಕು ಎಂದು ಅವರು ಕರೆ ನೀಡಿದರು.ಹಿಂದೂ ಸಮಾಜ ದಿಕ್ಕುತಪ್ಪಿದ ಸಮಯದಲ್ಲಿ ದಾರಿ ತೋರಿಸಿದವರು ಗುರುಗಳು,ಸನಾತನ ಧರ್ಮಕ್ಕೆ ಗೌರವ ಬಂದದ್ದೇ ದಾರ್ಶನಿಕರ ಚಿಂತನೆಯ ಫಲದಿಂದ, ಭಾರತದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಜಗತ್ತಿನ ಯಾವ ಶಕ್ತಿಗೂ ತಡೆಯಲು ಸಾಧ್ಯವಿಲ್ಲ, ವಿಕಸಿತ ಭಾರತದ ಕಲ್ಪನೆ ಕೂಡ ಗುರುಗಳ ಸಂದೇಶವೇ ಆಗಿದೆ, ಸರ್ವರಿಗೂ ಶಿಕ್ಷಣ, ಆರ್ಥಿಕ ಸ್ವಾವಲಂಬನೆಯೇ ಮುಖ್ಯ ಉದ್ದೇಶ, ಗುರುಗಳ ಚಿಂತನೆಯಂತೆ ಸತ್ಯ, ಧರ್ಮ, ನ್ಯಾಯದಲ್ಲಿ ಜನರ ಸೇವೆ ಮಾಡುತ್ತೇನೆ ಎಂದು ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೃತ್ತ ಲೋಕಾರ್ಪಣೆ ಸಂದರ್ಭದಲ್ಲಿ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ ಉಪಸ್ಥಿತರಿದ್ದರು
ಮಾಜಿ ಸಚಿವ ರಮಾನಾಥ ರೈ ಮಾತನಾಡಿ ಮಾನವತಾವಾದಿ ಸಮಗ್ರ ಹಿಂದೂ ಸಮಾಜದ ದರ್ಶನಿಕರಾದ ನಾರಾಯಣ ಗುರುಗಳು, ದೈವ ಸಂಭೂತರು, ವಿಶ್ವದ ,ಮಹಾನ್ ಚಿಂತಕರು ಕೂಡ ಗುರುಗಳ ಸಂದೇಶವನ್ನು ಒಪ್ಪಿಕೊಂಡಿದ್ದಾರೆ,ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಪಟ್ಟರು,ಅವರ ಚಿಂತನೆಯಂತೆ ಮನುಷ್ಯ ಮನುಷ್ಯರನ್ನು ಪ್ರೀತಿಸಿ ಒಟ್ಟಾಗಿ ಬಾಳೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ
ಭುವನೇಶ್ ಪಚ್ಚಿನಡ್ಕ ಮಾತನಾಡಿ, ಸಂಘದಲ್ಲಿ ಹೆಚ್ಚು ಜನ ತೊಡಗಿಸಿಕೊಂಡು ಸಮುದಾಯ ಅಭಿವೃದ್ಧಿಗೆ ಶ್ರಮಿಸೋಣ, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ ಪ್ರಾಸ್ತವಿಕವಾಗಿ ಮಾತನಾಡಿ, ಜೀವನದ ಮೌಲ್ಯವನ್ನು ತೋರಿಸಿಕೊಟ್ಟ ನಾರಾಯಣ ಗುರುಗಳು, ಎಲ್ಲರೂ ಜಾತಿ ಮತ ಧರ್ಮವನ್ನು ಬಿಟ್ಟು ಹಿಂದೂಗಳಾಗಿ ಬದುಕೋಣ ಎಂದು ಸಂದೇಶ ಸಾರಿದವರು, ನಮಗೆ ಈ ದೇಶವೇ ಮೊದಲು, ಧರ್ಮ ಜಾಗೃತಿ ದೇಶ ಜಾಗೃತಿಯೊಂದಿಗೆ ದೇಶಕ್ಕಾಗಿ ನಮ್ಮದೇ ಆದ ಕೊಡುಗೆ ಕೊಟ್ಟು ಗುರುಗಳ ಸಂದೇಶವನ್ನು ಸಕಾರ ಮಾಡೋಣ ಎಂದು ಹೇಳಿದರು.
ಬಂಟ್ವಾಳ ನಾಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿದರು.
ವೇದಿಕೆಯಲ್ಲಿ ಜೊತೆ ಕಾರ್ಯದರ್ಶಿ ಆನಂದ ಸಾಲಿಯಾನ್ ಶಂಭೂರು,ಕೋಶಧಿಕಾರಿ ಸುನೀಲ್ ಎಸ್ ಕುಂದರ್, ಲೆಕ್ಕ ಪರಿಶೋಧಕ ಪ್ರಶಾಂತ್ ಕೋಟ್ಯಾನ್, ತಾಲೂಕು ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ರಾಗಿಣಿ ಮಾಧವ, ಯುವವಾಹಿನಿ ಅಧ್ಯಕ್ಷ ಕಿರಣ್ ಪೂಂಜರಕೋಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಾರಾಯಣ ಗುರು ವೃತ್ತದ ನಿರ್ಮಾಣ ವಿನ್ಯಾಸ ಮಾಡಿದ ಸುಜಯ್ ಲೋಬೊ ಇವರನ್ನು ಸನ್ಮಾನಿಸಲಾಯಿತು ಹಾಗೂ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಉಪಾಧ್ಯಕ್ಷ ಜಯಪ್ರಕಾಶ ಜೆ ಎಸ್ ಜಕ್ರಿಬೆಟ್ಟು ಸ್ವಾಗತಿಸಿ, ಪ್ರ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಸ್ವಾಗತಿಸಿ,ಪ್ರೇಮಾನಾಥ ಕರ್ಕೇರ ವಿದ್ಯಾರ್ಥಿ ವೇತನ ಪುರಸ್ಕೃತರ ಪಟ್ಟಿ ವಾಚಿಸಿದರು, ಯುವವಾಹಿನಿ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಗುರುಪೂಜೆ, ಭಜನೆ ಅಪರಾಹ್ನ ದೇಯಿ ಬೈದೆತಿ ಸಿನಿಮಾ ಪ್ರದರ್ಶನಗೊಂಡಿತು.















