ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ. 2025-26ನೇ ಸಾಲಿನಲ್ಲಿ ರೂ.57.04 ಲಕ್ಷ ಲಾಭ: ಕರುಣೇಂದ್ರ ಪೂಜಾರಿ.

Coastal Bulletin
ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಮಹಾಸಭೆ. 2025-26ನೇ ಸಾಲಿನಲ್ಲಿ ರೂ.57.04 ಲಕ್ಷ ಲಾಭ: ಕರುಣೇಂದ್ರ ಪೂಜಾರಿ.

ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತವು 2025-26ನೇ ಸಾಲಿನಲ್ಲಿ ರೂ.57.04 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸಂಘದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಅಧ್ಯಕ್ಷ ಕರುಣೇಂದ್ರ ಎಂ. ಹೇಳಿದರು.

ಅವರು ಸೆ.1ರಂದು ಬಿ.ಸಿ.ರೋಡ್ ಜೋಡುಮಾರ್ಗ  ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘವು ಪ್ರಸ್ತುತ 4,686 ಸದಸ್ಯರನ್ನು ಹೊಂದಿದ್ದು, ರೂ. 3,75,41,220 ಪಾಲು ಬಂಡವಾಳ ಹೊಂದಿದೆ. ರೂ.43.41 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ಸದಸ್ಯರಿಗೆ ರೂ.46.30  ಕೋಟಿ ಸಾಲ ನೀಡಿದ್ದು ಸದಸ್ಯರಿಂದ ರೂ.39.01 ಕೋಟಿ ಸಾಲ ಹೊರಬಾಕಿ ಇದೆ.

ಸಂಘವು ಇತರ ಸಂಸ್ಥೆಗಳಲ್ಲಿ ರೂ.20.12 ಕೋಟಿ ಪಾಲು ಹಣ ಹಾಗೂ ಠೇವಣಾತಿ ಹೊಂದಿದೆ. 2025-26ನೇ ಸಾಲಿನಲ್ಲಿ ರೂ.404.89  ಕೋಟಿಗೂ ಅಧಿಕ ವ್ಯಾಪಾರ ವಹಿವಾಟು ಮೂಲಕ ಲಾಭ ಬಂದಿರುತ್ತದೆ. ಮತ್ತು ಒಟ್ಟು ವರ್ಷಾಂತ್ಯದಲ್ಲಿ ರೂ.57,04,247.51 ನಿವ್ವಳ ಲಾಭ ಗಳಿಸಿದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ‘ಎ’ ವರ್ಗೀಕರಣ ಪಡೆದಿದೆ.

“ಸಂಘದ ಸದಸ್ಯರ

ವಿಶ್ವಾಸ ಮತ್ತು ಸಹಕಾರದಿಂದಾಗಿ ಸಂಘವು ನಿರಂತರವಾಗಿ ಪ್ರಗತಿ ಸಾಧಿಸುತ್ತಿದೆ. ಸದಸ್ಯರಿಗೆ ಅಗತ್ಯವಿರುವ ಸಹಕಾರವನ್ನು ನೀಡುವುದರೊಂದಿಗೆ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಒಗ್ಗೂಡಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಲಿಕೆಯಲ್ಲಿ ಉತ್ತಮ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಿರ್ದೇಶಕರಾದ ಬಿ. ಜಯ, ವಿಠಲ ಪೂಜಾರಿ, ಮುರಳೀಧರ ಭಟ್, ಚಂದ್ರಶೇಖರ ಭಂಡಾರಿ ಬಿ., ದಿವಾಕರ ಶೆಟ್ಟಿ, ಜಯಂತಿ, ಎ. ಲಕ್ಷ್ಮೀ ವಿ. ಪ್ರಭು, ಪದ್ಮನಾಭ ಗೌಡ, ಗಣೇಶ್, ಹರೀಶ್  ಉಪಸ್ಥಿತರಿದ್ದರು.

  ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಪ್ರಕಾಶ್ ಕಾಮತ್ ವಾರ್ಷಿಕ ವರದಿ ವಾಚಿಸಿದರು.

ಉಪಾಧ್ಯಕ್ಷ ಆದಿರಾಜ್ ಕೆ. ಜೈನ್ ಸ್ವಾಗತಿಸಿ,ಬಿ. ಸದಾಶಿವ ಶೆಣೈ ಅವರು ವಂದಿಸಿದರು.ಬ್ಯಾಂಕ್ ನ ಸಿಬ್ಬಂದಿಗಳು ಸಹಕರಿಸಿದರು.ಕೀರ್ತನ ಕಾರ್ಯಕ್ರಮ ನಿರೂಪಿಸಿದರು.

Leave a Comment