ಸ್ಕೌಟ್ ಮತ್ತು ಗೈಡಿಂಗ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚುತ್ತದೆ :ಚಂದ್ರಪ್ಪ ಬಿ ಎಲ್

Coastal Bulletin
ಸ್ಕೌಟ್ ಮತ್ತು ಗೈಡಿಂಗ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚುತ್ತದೆ :ಚಂದ್ರಪ್ಪ ಬಿ ಎಲ್

ಬಂಟ್ವಾಳ :ಸ್ಕೌಟ್ ಮತ್ತು ಗೈಡಿಂಗ್ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಹಾಗೂ ರಾಷ್ಟ್ರದ ಬಗ್ಗೆ ಗೌರವವನ್ನು ಬೆಳೆಸುತ್ತದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಮೌಲ್ಯಗಳ ಬಗ್ಗೆ ಗೌರವ ಬೆಳೆಸುವುದರ ಜೊತೆಗೆ ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವೇನು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ. “ಉತ್ತಮ ನಾಗರಿಕ”ರಾಗಲು ಬೇಕಾದ ಗುಣಗಳನ್ನು ಬಾಲ್ಯದಲ್ಲಿಯೇ ಬೆಳೆಸುವುದರಿಂದ ಭವಿಷ್ಯದಲ್ಲಿ ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಶಾಲಾ ಶಿಕ್ಷಣದೊಂದಿಗೆ ಸ್ಕೌಟ್ ಮತ್ತು ಗೈಡಿಂಗ್ ಚಟುವಟಿಕೆಗಳನ್ನು ಅಳವಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚುತ್ತದೆ ಎಂದು ಸ್ಕೌಟ್ ಗೈಡ್ಸ್ ಸ್ಥಳೀಯ ಸಂಸ್ಥೆ ಪಾಣೆ ಮಂಗಳೂರು ಇದರ ಗೌರವ ಕಾರ್ಯಧ್ಯಕ್ಷರು ಮತ್ತು ಸಂಸ್ಥೆಯ ಸಭಾಧ್ಯಕ್ಷರು ಆಗಿರುವ  ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ  ಚಂದ್ರಪ್ಪ ಬಿ ಎಲ್ ರವರು ಸ್ಥಳೀಯ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಸಂಸ್ಥೆಯ  ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.

ಜೊತೆಗೆ ಸ್ಕೌಟ್ ಗೈಡ್ಸ್ ಸಂಸ್ಥೆಯ ಸಂಚಾಲಕರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಕರು ಆಗಿರುವ ಶ್ರೀಮತಿ ಆಶಾ ನಾಯಕ್ ಹಾಗೂ  2025-26 ರ ಸಾಲಿನ ದ.ಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಬಂಟ್ವಾಳ ಎಸ್‌ವಿಎಸ್ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ಕೆ ಎನ್  ರವರನ್ನು ಸನ್ಮಾನಿಸಲಾಯಿತು.

ಮಹಾಸಭೆಗೆದ.ಕ. ಸ್ಕೌಟ್ಸ್ ಗೈಡ್ಸ್ ನ ಜಿಲ್ಲಾ ಕಮಿಷನರ್ ಬಿ ಎಂ ತುಂಬೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತೀಮ್ ಕುಮಾರ್ ಭಾಗವಹಿಸಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುನಶ್ಚೇತನ ತರಬೇತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸ್ಥಳೀಯ ಸಂಸ್ಥೆಯ ಗೌರವ ಉಪಾಧ್ಯಕ್ಷರಾದ ಶ್ರೀ ಪಿ ಗೋವಿಂದ ಪೈ ಜನಪ್ರಿಯ ಉದ್ಯಮಿ ಪಾಣೆ ಮಂಗಳೂರು ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸ್ಥೆ ಗೌರವ ಉಪಾಧ್ಯಕ್ಷರು ಜನಪ್ರಿಯ ಉದ್ಯಮಿ ಶ್ರೀ

ಎಂ ನರೇಂದ್ರನಾಥ ಕುಡ್ವ, ಎಸ್‌ಎಲ್‌ಪಿ ವಿದ್ಯಾಲಯ ಪಾಣಿ ಮಂಗಳೂರುನ ಮುಖ್ಯ ಶಿಕ್ಷಕಿ  ಶ್ರೀಮತಿ ಶ್ವೇತಾ ಕಾಮತ್ ಏಳಬೆ ನರಿಕೊಂಬು,  ರೋಟರಿ ಕ್ಲಬ್ ಬಿಸಿ ರೋಡು ಇದರ ಅಧ್ಯಕ್ಷರಾದ ರವಿಕುಮಾರ್ ಉಪಸ್ಥಿತರಿದ್ದರು.

ಸ್ಕೌಟ್ ಗೈಡ್ ಸ್ಥಳೀಯ ಸಂಸ್ಥೆ ಪಾಣಿಮಂಗಳೂರು ಇದರ ವ್ಯಾಪ್ತಿಯ ಶಾಲೆಗಳ ಕಬ್ ಬುಲ್ ಬುಲ್ ಸ್ಕೌಟ್ ಮತ್ತು ಗೈಡ್ಸ್ ತರಬೇತಿ ಪಡೆದ ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.

ಕಾರ್ಯದರ್ಶಿ ಮಜಿ ಶಾಲಾ ಶಿಕ್ಷಕಿ  ಸ್ಕೌಟ್ ಮಾಸ್ಟರ್ ಸಂಗೀತ ಶರ್ಮಾ ರವರು ಸ್ವಾಗತಿಸಿ ವರದಿ ವಾಚಿಸಿದರು, ಕೋಶಾಧಿಕಾರಿ ನಿವೃತ್ತ ಶಿಕ್ಷಕ ಕಬ್ ಮಾಸ್ಟರ್ ಎಡಿಸಿ ಕೆ ಜಯಂತ ನಾಯಕ್ ರವರು ಪ್ರಸ್ತಾವಿಕ ಮಾತುಗಳನ್ನಾಡಿ 2025-26 ರ ಲೆಕ್ಕಪತ್ರ ಮಂಡನೆ ಮಾಡಿದರು. ಜೊತೆ ಕಾರ್ಯದರ್ಶಿ ಶ್ರೀ ರಾಮ ಕಲ್ಲಡ್ಕ ಶಾಲೆಯ ಸ್ಕೌಟರ್  ಎಚ್. ಕೊಟ್ರಪ್ಪ  ರವರು ಧನ್ಯವಾದ ನೀಡಿದರು.

Leave a Comment