ಪೊಳಲಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಇದರ ವಾರ್ಷಿಕ ಮಹಾಸಭೆ.

Coastal Bulletin
ಪೊಳಲಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಇದರ ವಾರ್ಷಿಕ ಮಹಾಸಭೆ.

ಬಂಟ್ವಾಳ :ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ)ಪೊಳಲಿ ಇದರ ವಾರ್ಷಿಕ ಮಹಾಸಭೆಯು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ವೆಂಕಟೇಶ್ ನಾವಡ ಇವರ ಅದ್ಯಕ್ಷತೆಯಲ್ಲಿ ಆ 30ರಂದು ನಡೆಯಿತು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಕೃಷಿ ಸಲಹಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸಂಘದ ನಿರ್ದೇಶಕ ಡಿ ಎ ಅಬೂಬಕ್ಕರ್ ಅಮುಂಜೆ, ನಾಟಿ ವೈದ್ಯರಾದ ಚೆನ್ನಪ್ಪ ಪೂಜಾರಿ ಬಡಕಬೈಲು, ಈಶ್ವರ ಪೂಜಾರಿ ಕಲಾಯಿ ಇವರನ್ನು ಸನ್ಮಾನಿಸಲಾಯಿತು.

ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ಶೇ 80ಕ್ಕಿಂತ ಅಧಿಕ ಅಂಕ ಪಡೆದ ಸದಸ್ಯರ

ಮಕ್ಕಳನ್ನು ಗೌರವನಿಧಿಯೊಂದಿಗೆ ಗೌರವಿಸಲಾಯಿತು.

ಸಂಘದ ನಿರ್ದೇಶಕರಾದ ಡಿ ಎ ಅಬೂಬಕ್ಕರ್, ಕರುಣಾಕರ ಆಳ್ವ, ಸುಕೇಶ್ ಚೌಟ, ಯಶವಂತ ಪೂಜಾರಿ, ಲಕ್ಷ್ಮೀಶ ಶೆಟ್ಟಿ, ನಿರಂಜಿನಿ ಸಿ ಶೆಟ್ಟಿ, ಜಯಂತಿ,ಗೊಡ್ಫ್ರಿ ಫೆರ್ನಾಂಡಿಸ್,ಕರಿಯದ ಹಾಗೂ ವಲಯ ಮೇಲ್ವಿಚಾರಕ ಕೀರ್ತಿರಾಜ್, ಸಿಬಂದಿಗಳು ಉಪಸ್ಥಿತರಿದ್ದರು.

ಸಂಘದ ಕಾರ್ಯನಿರ್ವಾಹಣಾಧಿಕಾರಿ ವಿಜಯ ರವಿ ಫೆರ್ನಾಂಡಿಸ್ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು, ಉಪಾಧ್ಯಕ್ಷ ಗೋಪಾಲ ಅಂಚನ್  ಬಡಕಬೈಲು ಧನ್ಯವಾದವಿತ್ತರು.

Leave a Comment