ಕೊಡ್ಮಾಣ್:ಸೆ.05ರಂದು ಶ್ರೀ ಕೃಷ್ಣ ಲೀಲೋತ್ಸವ, ಮೊಸರು ಕುಡಿಕೆ ಉತ್ಸವ.

Coastal Bulletin
ಕೊಡ್ಮಾಣ್:ಸೆ.05ರಂದು ಶ್ರೀ ಕೃಷ್ಣ ಲೀಲೋತ್ಸವ, ಮೊಸರು ಕುಡಿಕೆ ಉತ್ಸವ.

ಬಂಟ್ವಾಳ :ಶ್ರೀ ಕೃಷ್ಣ ಜನ್ಮೋತ್ಸವ ಸಮಿತಿ, ಕೊಡ್ಮಾಣ್ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಲೀಲೋತ್ಸವ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಸೆ.05ರಂದು ಶನಿವಾರ ಕೊಡ್ಮಾ ಣ್ ಮದಕ ಎಂಬಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮಗಳ ವಿವರ :

ಬೆಳಿಗ್ಗೆ ಗಂಟೆ 9.30ರಿಂದ  ಶ್ರೀ ಕೃಷ್ಣ ದೇವರಿಗೆ ಪೂಜೆ ಮತ್ತು ಭಜನೆ, ಮಧ್ಯಾಹ್ನ 12.00 ಗಂಟೆಗೆ  ಮಹಾಪೂಜೆ, ಅಪರಾಹ್ನ 2.30 ರಿಂದ  ಮಕ್ಕಳಿಗೆ ಶ್ರೀ ಕೃಷ್ಣ

ವೇಷ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ಇತರ ಸ್ಪರ್ಧೆಗಳು,ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ "ತುಳುನಾಡ ವೈಭವ"ಸಂಜೆ 5.00ಕ್ಕೆ ಬಹುಮಾನ ವಿತರಣೆ, ಬಳಿಕ ಶ್ರೀ ಕೃಷ್ಣ ಲೀಲೋತ್ಸವದ ವೈಭವಪೂರಿತ ಮೆರವಣಿಗೆ.

Leave a Comment