ಬಂಟ್ವಾಳ :ಹಿಂದೂ ಧರ್ಮದ ಏಕತೆ, ಸಂಸ್ಕೃತಿ ಮತ್ತು ಸನಾತನ ಪರಂಪರೆಯ ಉಳಿವಿಗಾಗಿ ನಮ್ಮಲ್ಲಿರುವ ಜಾತಿ,ರಾಜಕೀಯ, ವೈಮನಸ್ಸು ಬದಿಗಿಟ್ಟು ನಾವೆಲ್ಲರೂ ಒಂದಾಗಿ ನಿಲ್ಲೋಣ. ಒಗ್ಗಟ್ಟೇ ನಮ್ಮ ಶಕ್ತಿ, ಸನಾತನವೇ ನಮ್ಮ ಸಂಸ್ಕೃತಿ. ಕಲಿಯುಗದಲ್ಲಿ ಸಂಘಟನೆಯ ಮೂಲಕ ಧರ್ಮದ ಹಾದಿಯಲ್ಲಿ ನಡೆಯೋಣ, ಸೂರ್ಯ ಚಂದ್ರರು ಇರುವ ತನಕ ಸನಾತನ ಧರ್ಮಕ್ಕೆ ಅಳಿವಿಲ್ಲ ಎಂದು ಖ್ಯಾತ ವಾಗ್ಮಿ ಧಾರ್ಮಿಕ ಚಿಂತಕ ಡಾ. ರವೀಶ್ ಪಡುಮಲೆ ಹೇಳಿದರು.
ಅವರು ಶ್ರೀ ಕೃಷ್ಣ ಸೇವಾ ಸಮಿತಿ ಟ್ರಸ್ಟ್ (ರಿ.) ಛತ್ರಪತಿ ಶಿವಾಜಿ ಶಾಖೆ ಶಿವಾಜಿನಗರ ಬೆಂಜನಪದವು ಇವರ ಆಶ್ರಯದಲ್ಲಿ 27ನೇ ವರ್ಷದ ಸಾರ್ವಜನಿಕ ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ಸೆ.03ರಂದು ಸಂಜೆ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಂಗಳೂರು ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಆರ್ ಅಮೀನ್ ಮಾತನಾಡಿ, ಸಂಸ್ಕಾರ ಮತ್ತು ಸಂಸ್ಕೃತಿ ಉಳಿದರೆ ಮಾತ್ರ ವ್ಯಕ್ತಿ ಹಾಗೂ ವ್ಯಕ್ತಿತ್ವ ಉಳಿಯಬಹುದು,ಶಿಕ್ಷಣದ ಜೊತೆಗೆ ಲಲಿತ ಕಲಾ ವಿದ್ಯೆಯನ್ನು ಕಲಿತರೆ ವ್ಯಕ್ತಿತ್ವ ವಿಕಾಸನವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಯಕ್ಷ ಗುರು ಮೋಹನ್ ಅಮ್ಮುಂಜೆ, ಉದಯೋನ್ಮಖ ನೃತ್ಯ ಕಲಾವಿದೆ ಕು.ವೈಭವಿ ವಿ ಎಸ್ ಬೆಂಜನಪದವು, ರಾಜ್ಯ ಮಟ್ಟದ ಕಬಡ್ಡಿ ಪಟು ನಿತೀಶ್ ಜೋಗಿ ಶಿವಾಜಿನಗರ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು ಹಾಗೂ
ಸಾಧಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು, ಆಟೋಟ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ದೈವರಾಧಕ ಮನೋಜ್ ಕಟ್ಟೆಮಾರ್, ಅರ್ಚಕ ಶಂಕರ್ ಭಟ್ ಹೊಯ್ಗೆಗದ್ದೆ,ಉದ್ಯಮಿ ಸುಪ್ರಿತ್ ಆಳ್ವ ಪೊನ್ನೊಡಿ,ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ ಬಿ ಬೆಂಜನ ಪದವು ಕೊರಗಜ್ಜ ಸನ್ನಿದಿಯ ವಿಜಯ ಕೆ, ಶ್ರೀ ಕೃಷ್ಣ ಸೇವಾ ಸಮಿತಿ ಟ್ರಸ್ಟ್ ನ ಗೌರವಾಧ್ಯಕ್ಷ ಉಮೇಶ್ ಬಿ ಸಾಲ್ಯಾನ್, ಅಧ್ಯಕ್ಷ ಸನತ್ ಬಿ, ಪ್ರ ಕಾರ್ಯದರ್ಶಿ ಎ ರಾಮಚಂದ್ರ ಆಚಾರ್ಯ,ಹಿರಿಯರಾದ ಸೋಮಪ್ಪ ಮೂಲ್ಯ, ಉಪಾಧ್ಯಕ್ಷೆ ನಳಿನಿ ಸುಂದರ ಜೋಗಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಕ್ಷಿತ್ ಬೆಂಜನಪದವು ಸ್ವಾಗತಿಸಿ, ಭರತ್ ರಾಜ್ ಸನ್ಮಾನಪತ್ರ ವಾಚಿಸಿದರು, ಯಕ್ಷ ಸಂಘಟಕ ಬಿ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಹಾಗೂ ಯೋಗೀಶ್ ಸಹಕರಿಸಿದರು.
ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ,ಪಿಂಗಾರ ಕಲಾವಿದರ್ ಬೆದ್ರ ತಂಡದಿಂದ ಓಂಕಾರ ನಾಟಕ ಪ್ರದರ್ಶನಗೊಂಡಿತು.















