ಕಾಞಂಗಾಡು:ರಸ್ತೆ ಅಪಘಾತದಲ್ಲಿ ದೇವಾಲಯವೊಂದರ ಪ್ರಧಾನ ಅರ್ಚಕ ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್ ಸಹೋದರ ವೆಂಕಟೇಶ್ ಮೃತಪಟ್ಟ ಘಟನೆ ಕಾಞಂಗಾಡು ಎಂಬಲ್ಲಿ ನಡೆದಿದೆ.
ಇವರು ವಾರಕ್ಕೆ ಎರಡು ಸಲ ಮನೆಗೆ ಹೋಗುತ್ತಿದ್ದರು. ಶುಕ್ರವಾರ ರಾತ್ರಿ ಮನೆಗೆ ಬಂದ ಅವರು ಶನಿವಾರ ಬೈಕಿನಲ್ಲಿ ಚೆರ್ವತ್ತೂರಿಗೆ ಹೋಗುವಾಗ ಈ ಘಟನೆ ನಡೆದಿದೆ.
ಎದುರುಗಡೆ ಸಾಗುತ್ತಿದ್ದ ಮರ ಇದ್ದ ಲಾರಿ ಸೂಚನೆ ಕೊಡದೆ ವೆಂಕಟೇಶ್ ನ ಬೈಕಿಗೆ
ಹೊಡೆಯಿತು. ಹೊಡೆದ ರಭಸಕ್ಕೆ ಗಂಭೀರವಾಗಿ ಗಾಯಕೊಂಡಿದ್ದ ವೆಂಕಟೇಶ್ ನ್ನು ಸ್ಥಳೀಯರು ಕಣ್ಣೂರು ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋದಾಗ, ಅವರು ಮೃತಪಟ್ಟಿದ್ದರು.
ಇವರು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್, ಮೃತರ ತಾಯಿ, ಪತ್ನಿ, ಇಬ್ಬರು ಮಕ್ಕಳು,ಸಹೋದರ-ಸಹೋದರಿಯರನ್ನು ಅಗಲಿದ್ದಾರೆ.














