Coastal Bulletin

ಬೇಸಿಗೆ ಆರಂಭವಾಗಿದ್ದರೂ ಚಳಿ ಇನ್ನೂ ಹೋಗಿಲ್ಲ. ಈ ಚಳಿಗೆ ಜ್ವರ,ಶೀತ ,ಕೆಮ್ಮು ,ಗಂಟಲು ನೋವು ಶುರುವಾದರೆ ಸಾಕು ಅದು ಅಷ್ಟು ಬೇಗ ಕಡಿಮೆ ಸಹ ಆಗುದಿಲ್ಲ.

ಈ ಸಮಯದಲ್ಲಿ ಜ್ವರ, ಗಂಟಲು ನೋವು ಬಂದರೆ ಸಾಕು ಜನರು ಕೋರೋನಾ ಅಂದುಕೊಂಡು‌ ವೈದ್ಯರ ಹತ್ತಿರ ಹೋಗುತ್ತಾರೆ. ಹಾಗಂತ ಭಯ ಪಡುವ ಹಾಗಿಲ್ಲ, ಆಸ್ಪತ್ರೆಗೆ ಹೋಗುವ ಬದಲು ಮನೆಯಲ್ಲಿಯೇ ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಅದೇನೆಂದರೆ.......

* ದಿನಾಲೂ ಬೆಳಗ್ಗೆ ಎದ್ದು ಬಿಸಿ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಲಿಸುವುದು. ಇದರಿಂದ ಬಾಯಿಯಲ್ಲಿ ಇದ್ದ ಕ್ರಿಮಿಕೀಟಗಳು ಹೋಗಿ, ಗಂಟಲು ನೋವು ಇಲ್ಲದಂತಾಗುತ್ತದೆ.

* ಶುಂಠಿ,

ಜೀರಿಗೆ,ಕಾಳು ಮೆಣಸು ಹಾಕಿರುವ ಕಷಾಯ ಕುಡಿಯುದರಿಂದ ಗಂಟಲು ನೋವು ಮಾಯವಾಗುತ್ತದೆ.

* ಗಂಟಲು ನೋವಿಗೆ ರಾಮಬಾಣವೆಂದರೆ ಬೆಳ್ಳುಳ್ಳಿ . ಇದನ್ನು ಪ್ರತಿದಿನ ಎರಡು ಎಸಲು ತಿನ್ನುವುದರಿಂದ ಗಂಟಲು ನೋವು ನಿವಾರಣೆ ಆಗುತ್ತದೆ.

* ಪ್ರತಿದಿನ  ಬೆಳಗ್ಗೆ ತುಳಸಿ ಎಲೆ ಸಹ ತಿನ್ನುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.

* ಉಗುರು ಬೆಚ್ಚಗಿನ ನೀರಿಗೆ ಜೇನುತುಪ್ಪ ಮತ್ತು ನಿಂಬೆ ರಸ ಮಿಶ್ರಣ ಮಾಡಿ ಕುಡಿಯುದರಿಂದ ಕೂಡ ಒಳ್ಳೆಯದು.


Leave a Comment