ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು,ರಾಜ್ಯದ ಗಡಿಭಾಗದಲ್ಲಿ ಆರೋಗ್ಯ ಇಲಾಖೆಯಿಂದ ತೀವ್ರ ತಪಾಸಣೆ.

Coastal Bulletin
ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು,ರಾಜ್ಯದ ಗಡಿಭಾಗದಲ್ಲಿ ಆರೋಗ್ಯ ಇಲಾಖೆಯಿಂದ ತೀವ್ರ ತಪಾಸಣೆ.

ಮಡಿಕೇರಿ: ಕೇರಳ ರಾಜ್ಯದಲ್ಲಿ ಕೊರೋನಾ ರೂಪಾಂತರಿಯ (Corona Virus) ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೊಡಗು ಜಿಲ್ಲೆ ಗಡಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಗಡಿಯಲ್ಲಿ ತಪಾಸಣೆ ತೀವ್ರವಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿಗಳು ಗಡಿ ಗೇಟುಗಳಲ್ಲಿ ಮೊಕ್ಕಾಂ ಹೂಡಿದ್ದು, ಕೇರಳದಿಂದ ಬರುತ್ತಿರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಮೊದಲ ಹಂತವಾಗಿ ಥರ್ಮಲ್ ಸ್ಕ್ಯಾನಿಂಗ್ ಮಾಡುತ್ತಿದ್ದಾರೆ.

ಕುಟ್ಟ, ಮಾಕುಟ್ಟ, ಕರಿಕೆ ಹಾಗೂ ಸಂಪಾಜೆ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕೇರಳದಿಂದ ಕೊಡಗಿಗೆ ಓಡಾಡುವವರ ಸಂಖ್ಯೆ ಹೆಚ್ಚಿದ್ದು, ಆಗಮಿಸುವವರ ಮೇಲೆ ಹಾಗೂ ಇಲ್ಲಿಂದ ಅಲ್ಲಿಗೆ ಹೋಗಿ ಮರಳುತ್ತಿರುವವರ

ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸುತ್ತಿದೆ.

ಆದರೆ ಕೊಡಗಿನ ಜನತೆ ಆತಂಕ ಪಡಬೇಕಿಲ್ಲ, ಇದು ಅಪಾಯಕಾರಿಯಾದ ಸೋಂಕು ಅಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೇರಳದಲ್ಲಿ ಹೆಚ್ಚಾಗಿರುವ ಸೋಂಕಿಗೆ ಈಗಾಗಲೇ ನೀಡಲಾಗಿರುವ ಕೊರೊನಾ ವ್ಯಾಕ್ಸಿನ್‌ನಿಂದ ಪಡೆದ ಪ್ರತಿರೋಧ ಶಕ್ತಿ ಸಾಕು. ಕೊರೊನಾ ತೀವ್ರಗೊಂಡವರಲ್ಲೂ ಆಸ್ಪತ್ರೆವಾಸ ಅಗತ್ಯವಾದ ಗಂಭೀರತೆ ಕಂಡುಬಂದಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Leave a Comment