ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಉಂಟಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರ ಕುಟುಂಬವು ಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ, ಕ್ಯಾಲಿಫೋರ್ನಿಯಾ ನ್ಯಾಯಾಲಯವು ಕಂಪನಿಗೆ ಸುಮಾರು 80 ಬಿಲಿಯನ್ ರೂಪಾಯಿಗಳಷ್ಟು ಭಾರಿ ದಂಡವನ್ನು ವಿಧಿಸಿದೆ.
ಅಮೆರಿಕದ ಕ್ಯಾಲಿಫೋರ್ನಿಯಾ ಮೂಲಕ ಈ ಕಂಪೆನಿ ವಿರುದ್ಧ ಹಲವು ಕೋರ್ಟ್‌ಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜಾನ್ಸನ್ & ಜಾನ್ಸನ್ ಕಂಪೆನಿಯ ಬೇಬಿ ಪೌಡರ್ ಅನ್ನು ಜೀವಿತಾವಧಿಯವರೆಗೆ ಬಳಸಿದ್ದರಿಂದ ಕ್ಯಾನ್ಸರ್ ಉಂಟಾಗಿದ್ದರಿಂದ 2021ರಲ್ಲಿ ಮೃತಪಟ್ಟ ಮೇ ಮೂರ್ ಎನ್ನುವ ಮಹಿಳೆಯ ಕುಟುಂಬಸ್ಥರು ಈ ಕಂಪೆನಿ ವಿರುದ್ಧ ಕ್ಯಾಲಿಫೋರ್ನಿಯಾದ ಕೋರ್ಟ್‌ನಲ್ಲಿ ದೂರು ದಾಖಲು ಮಾಡಿದ್ದರು. ಇದೀಗ ಕೋರ್ಟ್, ಮೃತ ಮಹಿಳೆಯ ಕುಟುಂಬಕ್ಕೆ $16 ಮಿಲಿಯನ್ ಪರಿಹಾರ ಮತ್ತು $950 ಮಿಲಿಯನ್ ದಂಡನಾತ್ಮಕ ಪರಿಹಾರವನ್ನು
ನೀಡುವಂತೆ ಸೂಚಿಸಿದೆ. ಇದನ್ನು ಭಾರತದ ರೂಪಾಯಿಗಳಲ್ಲಿ ಹೇಳುವುದಾದರೆ, ₹79,915,265,100.00 ( ಸುಮಾರು 80 ಬಿಲಿಯನ್ ರೂಪಾಯಿ)
ಜಾನ್ಸನ್ & ಜಾನ್ಸನ್‌ನ ಟಾಲ್ಕಮ್ ಬೇಬಿ ಪೌಡರ್ ಉತ್ಪನ್ನಗಳಲ್ಲಿ ಆಸ್ಟೆಸ್ಟೋಸ್ ಫೈಬರ್‌ಗಳು ಇರುವುದರಿಂದ ಅವರ ಅಪರೂಪದ ಕ್ಯಾನ್ಸರ್‌ಗೆ ಕಾರಣವಾಯಿತು ಎಂದು ಆರೋಪಿಸಿ ಕುಟುಂಬವು ಮಹಿಳೆ ಮೃತಪಟ್ಟ 2021ರ ವರ್ಷವೇ ಮೊಕದ್ದಮೆ ಹೂಡಿತ್ತು. ಅದನ್ನು ಗಂಭೀರವಾಗಿ ಕೋರ್ಟ್ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಭಾರಿ ದಂಡವನ್ನು ವಿಧಿಸಿದ್ದು, ಇದನ್ನು ಪರಿಹಾರದ ರೂಪದಲ್ಲಿ ಕುಟುಂಬಕ್ಕೆ ನೀಡುವಂತೆ ಆದೇಶಿಸಿದೆ.















