Coastal Bulletin

ಬಂಟ್ವಾಳ : ಅಮ್ಮುಂಜೆ ಗ್ರಾಮದ ಬಟ್ಲಬೆಟ್ಟುವಿನಲ್ಲಿ ರೂ 10 ಲಕ್ಷ ವೆಚ್ಚದ ಕಾಂಕ್ರೀಟೀಕೃತ ರಸ್ತೆ ಕಾಮಗಾರಿಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭಾನುವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶಾಸಕರನ್ನು ಬಟ್ಲಬೆಟ್ಟು ಗ್ರಾಮಸ್ಥರ ಪರವಾಗಿ ಗೌರವಿಸಲಾಯಿತು.ಕಾಮಗಾರಿಗೆ ಸ್ಪಂದಿಸಿದ ಬಾ ಜ ಪಾ ದ ತಾಲೂಕು ಅಧ್ಯಕ್ಷರಾದ ದೇವಪ್ಪ ಪೂಜಾರಿ, ಅಮ್ಮುಂಜೆ ಗ್ರಾ ಪಂ ಅಧ್ಯಕ್ಷರಾದ ವಾಮನ ಆಚಾರ್ಯ, ಸದಸ್ಯರಾದ ಕಾರ್ತಿಕ್ ಬಲ್ಲಾಳ್ ರನ್ನು ಅಭಿನಂದಿಸಲಾಯಿತು.

ಪ್ರಮುಖರಾದ ಗ್ರಾ ಪಂ ಉಪಾಧ್ಯಕ್ಷೆ ಪ್ರಮೀಳಾ,

ಸದಸ್ಯರಾದ ರಾಧಾಕೃಷ್ಣ ತಂತ್ರಿ, ಜನಾರ್ಧನ ಬಾರಿಂಜ, ಪ್ರಭಾಕರ ಭಂಡಾರಿ, ಮೋಹನ್ ಅಮ್ಮುಂಜೆ, ಯಶವಂತ ಕೋಟ್ಯಾನ್ ಪೊಳಲಿ, ಸಂಜೀವ ಶೆಟ್ಟಿ, ವಿನಯ ನಾಯ್ಕ್ ಬಂಡಸಾಲೆ, ಅಬೂಬಕ್ಕರ್ ಬಿ ಎ, ಹರೀಶ್ ಹೆಚ್,ಸಂದೀಪ್ ಬೆಂಜನಪದವು ಮುಂತಾದವರು ಉಪಸ್ಥಿತರಿದ್ದರು.

ಯಕ್ಷ ಸಂಘಟಕ ಜನಾರ್ಧನ ಅಮ್ಮುಂಜೆ ಸ್ವಾಗತಿಸಿ, ಧನ್ಯವಾದವಿತ್ತು, ಕಾರ್ಯಕ್ರಮ ನಿರೂಪಿಸಿದರು.

Leave a Comment