Coastal Bulletin

ಬಂಟ್ವಾಳ: ಬ್ರಹ್ಮಕಲಶದ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನವನ್ನು ವಿವಿಧ ಭಾಗದಿಂದ ಸಂಪರ್ಕಿಸುವ ನಿಟ್ಟಿನಲ್ಲಿ ಜೀರ್ಣೋದ್ಧಾರ ಕಾರ್ಯದ ಪ್ರಯುಕ್ತ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು.

ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ಜೀಣೋದ್ದಾರ ಕಾರ್ಯಗಳನ್ನು ವೀಕ್ಷಿಸಿದರಲ್ಲದೆ ಧನುಷ ಗಾಣಿಗ ಕಲ್ಲಡ್ಕ ಹಾಡಿರುವ ಜಿ.ಎಸ್.ಗುರುಪುರ ಸಾಹಿತ್ಯ

ರಚನೆ,ಶ್ರೀಪ್ರಸಾದ್ ನಿರ್ದೇಶನ ಹಾಗೂ ಚಿತ್ರೀಕರಣ, ಸ್ವರಣ್ಯ ಮತ್ತು ಬಳಗ ಅಭಿನಯದ ದೇವಂದಬೆಟ್ಟು ಬ್ರಹ್ಮಕಲಶದ ಅಮಂತ್ರಣ ಗೀತೆಯನ್ನು ಬಿಡುಗಡೆಗೊಳಿಸಿದರು.

Leave a Comment