Coastal Bulletin

ಮಾಜಿ ಸಂಸದ ಜಿ. ಮಾದೇಗೌಡ(92) ವಿಧಿವಶರಾಗಿದ್ದಾರೆ.ಮಂಡ್ಯ ಬಾರತೀನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾದೇಗೌಡರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.

ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದ ಮಾದೇಗೌಡರು ಆರು ಬಾರಿ ಶಾಸಕರಾಗಿ,ಎರಡು ಬಾರಿ ಸಂಸದರಾಗಿಯೂ ಆಯ್ಕೆಯಾಗಿದ್ದರು. ಕಾವೇರಿ ನದಿ ನೀರಿನ ಹೋರಾಟಗಳ ರೂವಾರಿಯಾಗಿದ್ದ ಅವರು, ನೀರು ಬಿಡುವ ವಿಚಾರದಲ್ಲಿ

ಸರ್ಕಾರದ ನಿಲುವು ವಿರೋಧಿಸಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.1980 ರಿಂದ 83 ರವರೆಗೆ ಗುಂಡೂರಾವ್ ಸಂಪುಟದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದರು.ಅವರಿಗೆ ಎಲ್ಲಾ ಪಕ್ಷಗಳಲ್ಲೂ ಆತ್ಮೀಯರಿದ್ದರು.

Leave a Comment