ಮಂಗಳೂರು:ಕ್ಯೂ- ಅವೆನ್ಯೂ ಸಂಸ್ಥೆಯ ವೆಬ್ಸೈಟ್ ಮತ್ತು ಲಾಂಛನವನ್ನು ಜುಲೈ 16ರಂದು ನಗರದ ಬಿಜೈ ಕಾಪಿಕಾಡ್ ನಲ್ಲಿರುವ ಓಶಿಯನ್ ಪರ್ಲ್ ಹೋಟೆಲಿನ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.
ಸಂಸ್ಥೆಯ ಸಂಸ್ಥಾಪಕಿ ವೀಣಾ ಧೀರಜ್ ಕೋಟ್ಯಾನ್,ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವೆಬ್ಸೈಟ್ ಮತ್ತು ಲಾಂಛನವನ್ನು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ವ್ಯವಹಾರ ಮುಖ್ಯಸ್ಥ ರಾಹುಲ್ ಪೂಜಾರಿ ಯವರು ಸಂಸ್ಥೆಯ ಕಾರ್ಯ ವೈಖರಿ ಬಗ್ಗೆ ವಿವರಿಸಿ ಕ್ಯೂ-ಅವೆನ್ಯೂ ಎಂಬುವುದು ಇ ಕಾಮರ್ಸ್ ಮಾಧ್ಯಮದ ವ್ಯಾವಹಾರಿಕ ಉತ್ಪನ್ನ ವಾಗಿದ್ದು ಇದು ಮಾರಾಟಗಾರ ರನ್ನು ಮತ್ತು ಅಘಾದ ಶ್ರೇಣಿಯ ಉತ್ಪನ್ನ ಗಳನ್ನು ಒಂದೇ ವೇದಿಕೆಯಲ್ಲಿ ಮಾರಾಟಕ್ಕೆ ಲಭ್ಯ ವಿರುವಂತೆ ವ್ಯವಸ್ಥೆ ಮಾಡುವ ಒಂದು ಆಪ್ ಆಗಿರುತ್ತದೆ. ಹಾಗೂ ಮರು ಮಾರಾಟದ ವ್ಯವಸ್ಥೆಯನ್ನು ಕೂಡ ಹೊಂದಿರುತ್ತದೆ .ಈ ಮೂಲಕ ಯಾರೂ ಕೂಡ ಅವರ ಉತ್ಪನ್ನಗಳನ್ನು ಮರು ಮಾರಾಟ ಮಾಡಿ ಆದಾಯ ಗಳಿಸಲು
ಸುವರ್ಣ ಅವಕಾಶ ಎಂದರು.ವಾಟ್ಸಾಪ್ ಮೂಲಕ ಬಳಕೆದಾರರಿಗೆ ಉತ್ಪನ್ನಗಳ ಬೇಡಿಕೆಯನ್ನು ಸಲ್ಲಿಸಲು ಕ್ಯೂ- ಅವೆನ್ಯೂ ಆಯ್ಕೆಯನ್ನು ಹೊಂದಿದೆ. ಕ್ಯೂ-ಅವೆನ್ಯೂ ಮಹಿಳಾ ಸುರಕ್ಷತೆಯನ್ನು ಹೊಂದಿರುವ ಅನನ್ಯ ವೈಶಿಷ್ಟ್ಯತಯ ಏಕೈಕ ಆ್ಯಪ್ ಆಗಿರುತ್ತದೆ.ಯಾವುದೇ ಜಿ ಎಸ್ ಟಿ ನೋಂದಾಯಿತ ಮಾರಾಟಗಾರರೂ ಅವರ ಉತ್ಪನ್ನಗಳನ್ನೂ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವೈಶಿಷ್ಟ್ಯತೆಯನ್ನು ಕೂಡ ಕ್ಯೂ-ಅವೆನ್ಯೂ ಹೊಂದಿರುತ್ತದೆ, ಪ್ರಸ್ತುತ ಮಂಗಳೂರಿನಲ್ಲಿ ಮಾತ್ರ ಲಭ್ಯ ವಿರುವ ಕ್ಯೂ-ಅವೆನ್ಯೂ ಮುಂದಿನ ದಿನಗಳಲ್ಲಿ ಕರ್ನಾಟಕ ಹಾಗೂ ದೇಶಾದ್ಯಂತ ವ್ಯವಹಾರ ಹೊಂದಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ಸಂಸ್ಥಾಪಕಿ ರತ್ನಾವತಿ, ಟೆಕ್ನಿಕಲ್ ಹೆಡ್ ಕ್ಲೈಟನ್ ಡಿ'ಸಿಲ್ವಾ, ಮಾರುಕಟ್ಟೆ ಮುಖ್ಯಸ್ಥ ಮೆಹ್ವಿಷ್ ಹುಸೈನ್ ಮತ್ತು ಎಕ್ಸ್ಪ್ರೆಸ್ ಕೂಲ್ ಮಿತ್ಸುಬಿಷ್ ಏರ್ ಕಂಡೀಷನಿಂಗ್ ಡೀಲರ್ ಸಂಸ್ಥೆಯ ಆಡಳಿತ ನಿರ್ದೇಶಕ ವಿಜಯ್ ಮೊದಲಾದವರು ಉಪಸ್ಥಿತರಿದ್ದರು.
















