Coastal Bulletin

ನವದೆಹಲಿ: ನಿನ್ನೆ ವಿಶ್ವದಾದ್ಯಂತ ಬಿಡುಗಡೆಯಾಗಿರುವ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ವಿವಾದದ ಸುಳಿಗೆ ಸಿಲುಕಿದೆ. ಚಿತ್ರದ ಬಗ್ಗೆ ಪಾಸಿಟಿವ್‌ಗಿಂತ ನೆಗೆಟಿವ್ ಕಾಮೆಂಟ್‌ಗಳೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡುತ್ತಿವೆ. ಈ ಸಿನಿಮಾ ಸಾರ್ವಜನಿಕ ಪ್ರದರ್ಶನಕ್ಕೆ ಸೂಕ್ತವಲ್ಲ ಎಂದು ಪ್ರಮಾಣೀಕರಿಸುವಂತೆ ಕೋರಿ ಹಿಂದು ಸೇನಾ ಸಂಘಟನೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.

 ಈ ಚಿತ್ರವು ಧಾರ್ಮಿಕ ಮುಖಂಡರು, ಪಾತ್ರಗಳು ಮತ್ತು ಆಕೃತಿಗಳನ್ನು ಅಸಮರ್ಪಕ ಮತ್ತು ಅನುಚಿತ ರೀತಿಯಲ್ಲಿ ಚಿತ್ರಿಸುವ ಮೂಲಕ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ

ತಂದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಓಂ ರಾವುತ್ ನಿರ್ದೇಶನದ ಆದಿಪುರುಷ ಚಲನಚಿತ್ರದ ವಿರುದ್ಧ ಪಿಐಎಲ್ ಸಲ್ಲಿಸಿದ್ದಾರೆ. 

Leave a Comment