ಬೆಂಗಳೂರು : ಬಿಗ್ ಬಾಸ್ ಸೀಸನ್ 8 ರ ಗೆಲುವು ಮಂಜು ಪಾವಗಡ ಅವರ ಪಾಲಿಗೆ ಒಲಿದಿದೆ.
ಮಜಾಭಾರತ ಶೋ ಮೂಲಕ ಕನ್ನಡಿಗರಿಗೆ ಪರಿಚತವಾದ ಗ್ರಾಮೀಣ ಪ್ರತಿಭೆ ಮಂಜು ಪಾವಗಡ . ಬಿಗ್ ಬಾಸ್ ಶೋ ಗೆ ಬಂದಾಗಿನಿಂದಲೂ ಮನೆಯಲ್ಲಿ ಎಲ್ಲರನ್ನೂ ನಗಿಸುತ್ತ , ಟಾಸ್ಕ್ನಲ್ಲೂ ಉತ್ತಮವಾಗಿ ಆಟವಾಡುತ್ತಿದ್ದರು . ಇದೀಗ 45
ಲಕ್ಷಕ್ಕೂ ಅಧಿಕ ವೋಟ್ ಪಡೆಯುವ ಮೂಲಕ ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆಗಿದ್ದಾರೆ . ಈ ಮೂಲಕ ಬಿಗ್ ಬಾಸ್ ಟ್ರೋಫಿ ಹಾಗೂ 53 ಲಕ್ಷ ರೂ . ತಮ್ಮದಾಗಿಸಿಕೊಂಡಿದ್ದಾರೆ .















