Coastal Bulletin

ಬಂಟ್ವಾಳ :ಹಿಂದೂ ಜಾಗರಣಾ ವೇದಿಕೆ ಕಲಾಸಂಗಮ ನಡುಬೈಲ್, ಇಲ್ಲಿ ಹಿಂ ಜಾ ವೇ ಪುತ್ತೂರು ತಾಲೂಕು ಇದರ ವತಿಯಿಂದ ಭಾರತ ಮಾತಾ ಪೂಜಾನಾ ಕಾರ್ಯಕ್ರಮ ಇಂದು ಸಂಜೀವ ಕಾಪಿಕಾಡ್ ರವರ ಮನೆಯಲ್ಲಿ ನಡೆಯಿತು

ಕಾರ್ಯಕ್ರಮದ ಮುಖ್ಯ ಅತಿಥಿ, ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ಶ್ರೀ ನರಸಿಂಹ ಮಾಣಿ ರವರು ಮಾತನಾಡುತ್ತ,

 ಭಾರತ ಮಾತಾ ಪೂಜಾನಾ ಕಾರ್ಯಕ್ರಮ ದ ಮಹತ್ವ ದ ಬಗ್ಗೆ ಹಾಗೂ ದೇಶದ ಸೈನಿಕರ ಬಗ್ಗೆ ಯುವ ಪೀಳಿಗೆಗೆ ಅಗತ್ಯವಿರುವ ಮಾಹಿತಿ ನೀಡಿದರು


 ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವೀಂದ್ರ ನಾಯಕ್ ಪೊನ್ನೋಡಿ ವಹಿಸಿದ್ದರು ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದು ಜಾಗರಣ ವೇದಿಕೆಯ ಮಂಗಳೂರು ಜಿಲ್ಲಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ಬೆಂಜನಪದವು,ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಜಗದೀಶ್

ನೆತ್ತರಕೆರೆ, 

ವಿಜಯ್ ತುಂಬೆ ಅಧ್ಯಕ್ಷರು ತುಂಬೆ ವಲಯ,ಯೋಗಿಶ್ ಕುಮ್ಡೆಲ್ ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ,ಶಕುಂತಲಾ ಕೃಷ್ಣ ಭಟ್,ಸಂತೋಷ್ ನೆತ್ತರಕೆರೆ,

ಘಟಕದ ಗೌರವ ಅಧ್ಯಕ್ಷರಾದ ಶಂಕರ ಭಟ್ ಹೊಯ್ಗೆ ಗದ್ದೆ ಅಧ್ಯಕ್ಷರಾದ ಸುರೇಶ್ ನಡುಬೈಲು,ಹಿಂದು ಜಾಗರಣ ವೇದಿಕೆ ಕಲಸಂಗಮ ನಡುಬೈಲು ಘಟಕದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ದೀಕ್ಷಿತ್ ಪಕೋಲಿಮಾರ್ ಸ್ವಾಗತಿಸಿದರು.ಕಾರ್ಯಕ್ರಮದ ನಿರೂಪಣೆ ಸುಬ್ರಹ್ಮಣ್ಯ ಭಟ್ ಹೊಯ್ಗೆ ಗದ್ದೆ ರವರು ಮಾಡಿದರು ,ಮನೋಜ್ ಶರ್ಮಾ ರವರು ಧನ್ಯವಾದ ತಿಳಿಸಿ ಶಾಂತಿ ಮಂತ್ರ ದ ಒಟ್ಟಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಿದರು

-----------------------------------------------

Leave a Comment